ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪತಿಯ ಹಿಂಸೆ ತಾಳಲಾರದೇ ಗೃಹಿಣಿಯೋರ್ವಳು ಆತ್ಮ*ತ್ಯೆ ಘಟನೆ ತಾಲೂಕಿನ ಮುಂಡಳ್ಳಿ ನೀರಗದ್ದೆ ಗ್ರಾಮದಲ್ಲಿ ನಡೆದಿದೆ.
32 ವರ್ಷದ ಸವಿತಾ ಸೋಮಯ್ಯ ನಾಯ್ಕ ಗುರುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಾಕೆ. ಕೆಲ ವರ್ಷಗಳ ಹಿಂದೆ ಈಕೆ ಮದುವೆಯಾಗಿದ್ದಳು. ಮದುವೆ ಆದಾಗಿನಿಂದಲೇ ಗಂಡ ಸೋಮಯ್ಯ ಅತಿಯಾದ ಸಂಶಯ ಪಟ್ಟು, ನಿರಂತರವಾಗಿ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಎನ್ನಲಾಗಿದೆ. ದೈಹಿಕ–ಮಾನಸಿಕ ಹಿಂಸೆಗೆ ಬೇಸತ್ತು ತಾಳ್ಮೆ ಕಳೆದುಕೊಂಡ ಸವಿತಾ ಕೊನೆಗೂ ಜೀವ ಕಳೆದುಕೊಂಡಿದ್ದಾಳೆಂಬ ಆರೋಪ ವ್ಯಕ್ತವಾಗಿದೆ.
“ನನ್ನ ತಂಗಿಯ ಸಾವಿಗೆ ಪತಿಯೇ ಕಾರಣ” ಎಂದು ಸವಿತಾಳ ಅಣ್ಣ ಮೋಹನ ನಾಯ್ಕ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ(Bhatkal Rural Station) ದೂರು ನೀಡಿದ್ದಾರೆ. ತಕ್ಷಣವೇ ಗಂಡನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.