ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಬಾಲಕನ ಕೈಯಿಂದ ಏರ್ ಗನ್ ಫೈರ್(Air Gun Fire) ಆಗಿ ಇನ್ನೋರ್ವ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿರಸಿ(Sirsi) ತಾಲೂಕಿನ ಚಪಗಿ ಸೋಮನಹಳ್ಳಿ(Chipagi Somanahalli) ಗ್ರಾಮದಲ್ಲಿ ಸಂಭವಿಸಿದೆ.

ರಾಘವೇಂದ್ರ ಕೇಶವ ಹೆಗಡೆ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬುವರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಕರಿಯಪ್ಪ (9) ಸ್ಥಳದಲ್ಲೇ ಮೃತಪಟ್ಟ ಬಾಲಕ ಎಂದು ತಿಳಿದುಬಂದಿದ್ದು, ಏಳು ವರ್ಷದ ತಮ್ಮನಿಂದ ಸಾವು ಕಂಡಿದ್ದಾನೆ. ಸೋಮನಹಳ್ಳಿಯ ರಾಘವೇಂದ್ರ ಹೆಗಡೆ ತಮ್ಮ ಗಣಪತಿ ಹೆಗಡೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ರಾಘವೇಂದ್ರ ಹೆಗಡೆ ಸೇರಿದಂತೆ ಸೋಮನಳ್ಳಿಯ ಅಡಿಕೆ ತೋಟದಲ್ಲಿ ಮಂಗನ ಕಾಟ ತಪ್ಪಿಸಲು ನಿತೇಶ್ ಗೌಡ ಎಂಬಾತನನ್ನು ಏರ್ ಗನ್ ಮೂಲಕ ತೋಟ ಕಾಯಲು ಊರವರು ನೇಮಿಸಿದ್ದರು. ಕಾರಣ ಶುಕ್ರವಾರ ಬೆಳಿಗ್ಗೆಯೂ ನಿತೇಶ್ ತೋಟ ಕಾದು ಮೊಬೈಲ್ ಕರೆನ್ಸಿ(Mobile Currency) ಹಾಕಿಕೊಳ್ಳಲು ಗಣಪತಿ ಹೆಗಡೆ ಮನೆಗೆ ಹೋಗಿದ್ದಾರೆ. ಅಲ್ಲಿ ಈದ್ ಮಿಲಾದ್ ರಜೆಯ ಕಾರಣ ಆಟವಾಡುತ್ತಿದ್ದ ಮೂವರು ಮಕ್ಕಳು ಬಂದಿದ್ದು, ಆ ವೇಳೆ ಬಾಲಕ ಕರಿಯಪ್ಪನ ತಮ್ಮ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಕರಿಯಪ್ಪ ಎದೆಗೆ ತಾಗಿದ್ದು, ತಕ್ಷಣ ಮೃತಪಟ್ಟಿದ್ದಾನೆ ಎಂದು ಮನೆ ಮಾಲೀಕ ಗಣಪತಿ ಹೆಗಡೆ ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Sirsi Rural Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಪ್ರೌಢಶಾಲಾ ಶಿಕ್ಷಕ  ಗೋಪಾಲ ನಾಯ್ಕ ಅವರಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ