ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಚಲಿಸುತ್ತಿದ್ದ ಬೈಕ್ ಗೆ ಕಡವೆ  ಅಡ್ಡ ಬಂದು ಢಿಕ್ಕಿಯಾದ(Accident) ಪರಿಣಾಮ  ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಉಡುಪಿ(Udupi) ಜಿಲ್ಲೆಯ ಕುಂದಾಪುರ(Kundapur) ತಾಲೂಕಿನ ಕಮಲಶಿಲೆ(Kamalashile) ಸಮೀಪ ತಾರೆಕುಡ್ಲುನಲ್ಲಿ ಘಟನೆ ಸಂಭವಿಸಿದೆ. ಕಾವ್ರಡಿಯ ಶ್ರೇಯಸ್ ಮೊಗವೀರ (23) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಸಹಸವಾರ ವಿಘ್ನೇಶ್ ಎಂದು ಗೊತ್ತಾಗಿದ್ದು ಕುಂದಾಪುರ(Kundapur) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಸ್ನೇಹಿತರು ಶನಿವಾರ ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ ತಾರೆಕುಡ್ಲು ಸಮೀಪ ದೊಡ್ಡ ಕಡವೆ ಯೊಂದು ಬೈಕ್ ಗೆ ಒಮ್ಮೆಲೇ ಅಡ್ಡ ಬಂದಿತ್ತು. ಪರಿಣಾಮ ಕಡವೆಗೆ ಡಿಕ್ಕಿ ಸಂಭವಿಸಿ ಈ ದುರಂತ ಸಂಭವಿಸಿದೆ. ಶಂಕರನಾರಾಯಣ ಠಾಣೆಯ ಪೊಲೀಸರು (Shankarnarayan Station Police) ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಸೇವೆ ಸಲ್ಲಿಸಿದ್ದ ದಕ್ಷಿಣಕನ್ನಡ ಮೂಲದ ವೈದ್ಯ ಭೋಪಾಲ್ ನಲ್ಲಿ ನೇಣಿಗೆ ಶರಣು.

ಕೈಗಾ ಬಳಿ ಹಾಡಹಗಲೇ ರಾಜಗಾಂಭೀರ್ಯದಿಂದ ನಡೆದ ಹುಲಿ