ಭಟ್ಕಳ (BHATKAL) : ಮಹಾರಾಷ್ಟ್ರದ ಪುಣೆಯಲ್ಲಿ (Maharashtra Pune) ನಡೆದ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸ್ಪರ್ಧೆ “ಗುಣಿಜ ಬಂದೀಶ್ ರಾಷ್ಟ್ರೀಯ ಪ್ರತಿಯೋಗಿತಾ” ಸ್ಪರ್ಧೆಯಲ್ಲಿ, ಕುಮಟಾದ ವಿದುಷಿ ಕುಮಾರಿ ತೇಜಸ್ವಿನಿ ದಿಗಂಬರ ವೆರ್ಣೇಕರ್ ಪ್ರಥಮ ಸ್ಥಾನಕ್ಕೆ ಪಾತ್ರರಾಗಿ ಸಾಧನೆ ಮಾಡಿರುತ್ತಾರೆ.
ಪದ್ಮಭೂಷಣ(Padmabhooshana) ಪಂಡಿತ ಸಿ.ಆರ್.ವ್ಯಾಸ್ ಇವರ ಜನ್ಮ ಶತಮಾನೋತ್ಸವದ ಅಂಗವಾಗಿ ಗ್ರೇಸ್ ಫೌಂಡೇಶನ್(Grace Foundation) ಮತ್ತು ಪಂಚಮ್ ನಿಷಾದ್ (Pancham Nishad) ಇವರು ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಪಂಡಿತ ಸಿ.ಆರ್.ವ್ಯಾಸ್ ರವರು ರಚಿಸಿದ ಬಂದೀಶ್ ಗಳನ್ನು ಹಾಡಬೇಕಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಆಯ್ದ 30 ಸ್ಪರ್ಧಿಗಳ ನಡುವೆ ಸ್ಪರ್ಧೆಯು ಪುಣೆಯಲ್ಲಿ ಸತತ 3 ಹಂತಗಳಲ್ಲಿ ನಡೆಯಿತು.
ಈ ಸ್ಪರ್ಧೆಯ ನಿರ್ಣಾಯಕರಾಗಿ ಸಂಗೀತ ಜಗತ್ತಿನ ದಿಗ್ಗಜರಾದ ಪದ್ಮಭೂಷಣ ಪಂ.ಸಾಜನ್ ಮಿಶ್ರ, ಪದ್ಮಶ್ರೀ ಪಂ.ಸತೀಶ ವ್ಯಾಸ, ಪದ್ಮಶ್ರೀ ಪಂಡಿತ ಉಲ್ಹಾಸ್ ಕಶಾಲ್ಕರ್, ವಿದುಷಿ ಶ್ರೀಮತಿ ಅಶ್ವಿನಿ ಭಿಡೆ ದೇಶಪಾಂಡೆ, ಪದ್ಮಶ್ರೀ ಪಂ.ಸುರೇಶ ತಲ್ವಾಲ್ಕರ್, ವಿದುಷಿ ದೇವಕಿ ಪಂಡಿತ, ಪದ್ಮಶ್ರೀ ಪಂ.ಸತೀಶ ವ್ಯಾಸ, ಪಂ.ಸುಹಾಸ ವ್ಯಾಸ, ವಿದುಷಿ ನಿರ್ಮಲಾ ಗೋಗಟೆ ಆಗಮಿಸಿದ್ದರು.
ಎಲ್ಲ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ತೇಜಸ್ವಿನಿ ವೆರ್ಣೇಕರ್(Tejaswini Vernekar) ಪ್ರಥಮ ಸ್ಥಾನ ವಿಜೇತರಾಗಿ ಒಂದು ಲಕ್ಷದ ಇಪ್ಪತ್ತೈದು ಸಾವಿರ ನಗದು,ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ. ಬಹುಮಾನ ವಿತರಣಾ ಸಮಾರಂಭವು ಪುಣೆಯ ಶ್ರೀರಾಮ್ ಲಾಗೂ ಅವಕಾಶ ರಂಗ ಭವನದಲ್ಲಿ ನಡೆಯಿತು.
ಇವರು ಕಾಶಿ ಹಿಂದೂ ವಿಶ್ವವಿದ್ಯಾಲಯದ(Kashi Hindu Viswavidyalaya) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚಿನ ಅಂಕಗಗಳೊಂದಿಗೆ 4 ಚಿನ್ನದ ಪದಕಗಳಿಗೆ ಭಾಜನರಾಗಿದ್ದು, ಅಖಿಲ ಭಾರತ ಗಂಧರ್ವ ಮಹಾಮಂಡಳಿಯವರು ನಡೆಸುವ ಅಲಂಕಾರ ಪರೀಕ್ಷೆಯಲ್ಲಿ ರಾಷ್ಟಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಆಲ್ ಇಂಡಿಯಾ ರೇಡಿಯೋ ದವರು (All India Radio) ನಡೆಸುವ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು(Women and Child Development Department) ನೀಡುವ ಕೆಳದಿ ಚೆನ್ನಮ್ಮ ಪ್ರಶಸ್ತಿ, ಸೊಲ್ಲಾಪುರದ ದುರ್ಲಭ ಸುಂದ್ರಿ ವಾದ್ಯ ಕಲಾ ಅಕಾಡೆಮಿಯ “ಸುಂದ್ರಿ ಸಾಮ್ರಾಟ್ ಪುರಸ್ಕಾರಕ್ಕೆ ಭಾಜನರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಇವರು ಕೇಂದ್ರ ಸರ್ಕಾರ ನೀಡುವ “ಯಂಗ್ ಆರ್ಟಿಸ್ಟ್” ಶಿಷ್ಯವೇತನ, ಕರ್ನಾಟಕ ನೃತ್ಯ ಮತ್ತು ಸಂಗೀತ ಅಕಾಡೆಮಿಯ ಶಿಷ್ಟವೇತನಕ್ಕೂ ಪಾತ್ರರಾಗಿರುತ್ತಾರೆ.
ತೇಜಸ್ವಿನಿ ವೆರ್ಣೇಕರ್ ಅವರು ತಿರುಪತಿ, ಪ್ರಯಾಗ, ತ್ರಿಪುರ, ಕೊಲ್ಕತ್ತಾ, ಮುಂಬೈ, ಜಲಂಧರ್, ವಾರಾಣಸಿ, ಸೋನಭದ್ರ, ತಲೇಗಾಂವ್, ಸೊಲ್ಲಾಪುರ, ಬೆಂಗಳೂರು, ಗಾಣಗಾಪುರ, ಅಗರ್ತಲಾ ಅಲ್ಲದೆ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆ ಅಯೋಧ್ಯೆ ಶ್ರೀ ರಾಮಮಂದಿರದಲ್ಲೂ ಸಂಗೀತ ಕಚೇರಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರಗಿದ್ದಾರೆ.
ಕುಮಟಾದ ಶಂಕರ ಲಕ್ಷ್ಮಣ ವೆರ್ಣೇಕರ್ ಮತ್ತು ಶ್ರೀಮತಿ ಸುಮಿತ್ರಬಾಯಿ ಇವರ ಮೊಮ್ಮಗಳಾಗಿದ್ದಾರೆ. ಇವರ ಸಾಧನೆ ಜಿಲ್ಲೆಗೆ ಹೆಮ್ಮೆಯಾಗಿದೆ.
ಇದನ್ನು ಓದಿ : ಹೊತ್ತಿ ಉರಿದ ದ್ವಿಚಕ್ರ ವಾಹನ. ದಾಂಡೇಲಿಯಲ್ಲಿ ಆತಂಕ
ಅರಣ್ಯ ಭೂಮಿ ಕಬಜಾ ಮಾಡಿಕೊಳ್ಳಿ. ಗ್ರಾಮಸ್ಥರ ಆಗ್ರಹ.
ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ
ಗೋ ಗಳ್ಳರಿಗೆ ಹೆಡೆ ಮುರಿ ಕಟ್ಟಿದ ಪೊಲೀಸರು
ಬಟ್ಟೆ ಪ್ಯಾನ್ಸಿ ಅಂಗಡಿಯಲ್ಲಿ ಕಳ್ಳಿಯರ ಕಾಟ. ಬಿತ್ತು ಧರ್ಮದೇಟು