ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) :  ತಾಲೂಕಿನ ಅರೆಬೈಲ್(Arebail) ಬಳಿ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ  ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ರೂಪೇಶ ನಾಯ್ಕ ಎಂಬವರಿಗೆ ಸೇರಿದ  ಡಸ್ಟರ್‌ ಕಾರು(Duster Car) ಬೆಂಕಿಗಾಹುತಿಯಾಗಿದೆ. ಸೋಮವಾರ ತಡ ರಾತ್ರಿ ಈ ಘಟನೆ ನಡೆದಿದೆ. ಯಲ್ಲಾಪುರದಿಂದ  ಕುಮಟಾಕ್ಕೆ (Yallapur to Kumta) ತೆರಳುತ್ತಿರುವ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ.  ಚಾಲಕ‌ನ ನಿಯಂತ್ರಣ  ತಪ್ಪಿ ಕಾರು  ರಾಷ್ಟ್ರೀಯ ಹೆದ್ದಾರಿಯ(National Highway) ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ.

ಕಾರಿನಲ್ಲಿದ್ದ ಇಬ್ಬರೂ ಪಾರಾಗಿದ್ದು ಯಾವುದೇ  ಅಪಾಯ ಸಂಭವಿಸಿಲ್ಲ. ಯಲ್ಲಾಪುರ ಪೊಲೀಸರು(Yallapur Police) ಹಾಗೂ ಅಗ್ನಿಶಾಮಕ‌ ದಳದ(Fire Brigade) ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಗೋಕರ್ಣದ ಗುಹೆಯಲ್ಲಿ ಮಕ್ಕಳೊಂದಿಗೆ ಸಿಕ್ಕ ರಷ್ಯಾ ಮಹಿಳೆ ಸುರಕ್ಷಿತವಾಗಿ ತಾಯ್ನಾಡಿಗೆ.

ರೈಲಿಗೆ ಸಿಲುಕಿ ಆತ್ಮತ್ಯೆಗೆ ಶರಣಾದ ವ್ಯಕ್ತಿ. ದೂರು ದಾಖಲು.

ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಗೋವಾದಲ್ಲಿ ಮಾಡಿದ ಅಧಿಕಾರಿಗಳು.