ಕಾರವಾರ(Karwar) : ಬೆಳಕಿನ ಹಬ್ಬ ದೀಪಾವಳಿಯ(Deepavali) ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ಹೂ ಹಣ್ಣು, ಸಿಹಿ ತಿಂಡಿ, ಅಗತ್ಯ ವಸ್ತುಗಳ ಖರೀದಿಸಲು ನಾಗರಿಕರು ಬ್ಯುಸಿಯಾಗಿದ್ದರು.

ಸರ್ಕಾರಿ ಇಲಾಖೆಗಳಲ್ಲೂ ಸಹ ವಾಹನಗಳಿಗೆ ಪೂಜೆ(Vehicle pooja) ನೆರವೇರಿಸಲಾಯಿತು. ಜಿಲ್ಲಾ ಪಂಚಾಯತ್ ಆವರಣದಲ್ಲಿ  ಜಿಲ್ಲಾ ಪಂಚಾಯತ್ ನ ವಿವಿಧ ವಿಭಾಗಗಳ ವಾಹನಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದು (Zilla Panchayat CEO ) ಪೂಜೆ ನೆರೆವೇರಿಸಿದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಅಮಾವಾಸ್ಯೆ ಗಳಿಗೆ ಗುರುವಾರ ಸಂಜೆ ಮತ್ತು ಶುಕ್ರವಾರ ಬೆಳಿಗ್ಗೆ ವರೆಗೆ ಲಕ್ಷ್ಮಿ ಪೂಜೆ ನಡೆಸಲು ಜನತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : ದಲಿತರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ

ಇನ್ನೂ ಕೆಲ ದಿನದವರೆಗೆ ಮಳೆ. ಯೆಲ್ಲೊ ಅಲರ್ಟ್ ಘೋಷಣೆ