ಅಂಕೋಲಾ(ANKOLA) : ಮಳೆಗಾಲದಲ್ಲಿ ಕಡಲ ತೀರದ ನಿವಾಸಿಗಳಿಗೆ ನೆಮ್ಮದಿ ಇಲ್ಲ. ಕಡಲು ಘರ್ಜಿಸುತ್ತಾ ಕಡಲಂಚಿನ ನಿವಾಸಿಗಳ ಬದುಕು(LIFE) ಕಸಿದುಕೊಳ್ಳುತ್ತಿದೆ. ತಾಲೂಕಿನ ಹಾರವಾಡದಲ್ಲಿ ಹಲವು ಮೀನುಗಾರರ ಮನೆಗಳು(FISHERMEN HOUSES) ಸಮುದ್ರ ನುಂಗಿದ ಘಟನೆ ನಡೆದಿದೆ.

ತರಂಗಮೇಟ್ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಆಳೆತ್ತರದ ಅಲೆಗಳು ತೀರವನ್ನ ಬಲಿ ತೆಗೆದುಕೊಳ್ಳುತ್ತಿದೆ.  ಈಗಾಗಲೇ ಸುಮಾರು ಐದು ಮನೆಗಳು ಕಡಲು ಆಪೋಶನ ಪಡೆದುಕೊಂಡಿದೆ.
 ಎಲ್ಲವೂ ಬಡ ಮೀನುಗಾರ ಕುಟುಂಬದ ಮನೆಗಳಾಗಿವೆ. ಮನೆ ಕಳೆದುಕೊಂಡು ಕುಟುಂಬದವರು ಅತಂತ್ರರಾಗಿದ್ದಾರೆ.

 ಈ ಭಾಗದಲ್ಲಿ ವ್ಯಾಪಕ ಪ್ರಮಾಣದ ಕಡಲಕೊರೆತ ಆಗುತ್ತಿರುವ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ನೀಡಿದ್ದರು.  ಅಲ್ಲದೆ ಶಾಸಕರು, ಸಚಿವರ ಗಮನಕ್ಕೆ ತಂದಿದ್ದರು.  ಬಂದರು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಇದುವರೆಗೂ ಕಡಲ ಕೊರೆತ ತಡೆಗಟ್ಟುವ ಕೆಲಸ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CHIEF MINISTER SIDDARAMAIHA) ಅವರು ಉತ್ತರಕನ್ನಡ ಜಿಲ್ಲೆಯ ಶಿರೂರು ದುರಂತ(SHIRURU TRAGEDY) ವೀಕ್ಷಿಸಲು ಅಂಕೋಲಾಕ್ಕೆ ಬಂದಾಗ ಹಾರವಾಡ ಗ್ರಾಮಕ್ಕೆ (HARWAD VILLAGE) ಭೇಟಿ ನೀಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಯಾವುದೇ ಕೆಲಸ ಆಗಿಲ್ಲ. ಈಗಲೂ ಕೂಡ ಕಡಲ ಅಂಚಿನ ಮನೆಗಳನ್ನು ಸಮುದ್ರ ನುಂಗುತ್ತಿದೆ. ತೆಂಗಿನಮರಗಳು ಬಿದ್ದಿರುವುದಕ್ಕೆ ಲೆಕ್ಕವಿಲ್ಲ.

ತರಂಗಮೇಟ್ (TARANGAMATE) ಭಾಗದಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಹಲವು ಮೀನುಗಾರಿಕೆ ಶೆಡ್ ಗಳಿವೆ. ಈಗಾಗಲೇ ಕಡಲ ಆರ್ಭಟಕ್ಕೆ ಶೆಡ್ಗಳು ಸಮುದ್ರ ಪಾಲಾಗಿವೆ.  ಮಳೆಗಾಲದ ಆರಂಭದಿಂದ ಇವರೆಗೂ ಕೂಡ ಕಡಲ ತೀರದಲ್ಲಿ ವಾಸವಾಗಿರುವ ನಿವಾಸಿಗಳು ಭೀತಿಯಿಂದ ಕಾಲ ಕಳೆಯುವಂತಾಗಿದೆ. ಯಾವಾಗ ಸಮುದ್ರ ತಮ್ಮ ಮನೆಗಳನ್ನ ಆಪೋಶನ ಪಡೆದುಕೊಳ್ಳುತ್ತೋ ಎಂಬ ಭಯದಲ್ಲಿದ್ದಾರೆ.

ಹೀಗಾಗಿ ಮೀನುಗಾರ ಮುಖಂಡರೊಂದಿಗೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ. ತಮ್ಮನ್ನ ರಕ್ಷಿಸಿ ಎಂದು ಹೇಳಿದ್ದಾರೆ. ಇನ್ನೊಂದು ವಾರದಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದನ್ನು ಓದಿ : ಇತಿಹಾಸದಲ್ಲಿ ಈಶ್ವರನಿಗೆ ಮೊದಲ ಭಸ್ಮಾರ್ಚನೆ.

ಗಾಂಧಿ ಮಾರ್ಕೆಟಲ್ಲಿ ನೀನಾ ನಾನಾ.