ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಉತ್ತರಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ(MLA Bheemanna Naik) ಅವರ ಮನೆಗೆ ಚಿರತೆ(Leopard) ನುಗ್ಗಿದೆ.
ಶಿರಸಿ ತಾಲೂಕಿನ(Sirsi Taliku) ಮಳಲಗಾಂವದ(Malalagaum) ಶಾಸಕರ ತೋಟದ ಮನೆಗೆ ಒಳಗೆ ಬಂದ ಚಿರತೆಯೊಂದು(Leopard) ನಾಯಿ ಮರಿಯನ್ನು ಹೊತ್ತೊಯ್ದಿದೆ. ಮಂಗಳವಾರ ಬೆಳಿಗ್ಗೆ ಒಂದು ಗಂಟೆ ಸುಮಾರಿಗೆ ಚಿರತೆ ಮನೆಯ ಆವರಣದೊಳಗೆ ಪ್ರವೇಶಿಸಿದೆ. ಚಿರತೆ ಒಳಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಳಗೆ ಪ್ರವೇಶಿಸಿದ ಚಿರತೆ ಸುತ್ತಲೂ ನೋಡಿದೆ, ಬೇಟೆಗಾಗಿ ಹುಡುಕಿದೆ. ಮತ್ತು ನಂತರ ಹೊರಗೆ ಮಲಗಿದ್ದ ನಾಯಿಮರಿಗಳನ್ನು(pet) ಹೊತ್ತೊಯ್ದಿದೆ.
ಮನೆಯ ಸಿಬ್ಬಂದಿ ಮರುದಿನ ಬೆಳಿಗ್ಗೆ ಸಿಸಿಟಿವಿ ವೀಡಿಯೊಗಳನ್ನು ಪರಿಶೀಲಿಸುವಾಗ ರಾತ್ರಿ ಆಗಮಿಸಿದ ಚಿರತೆಯ ಬಗ್ಗೆ ಗೊತ್ತಾಗಿದೆ ಎನ್ನಲಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ(Forest Officers) ಮಾಹಿತಿ ನೀಡಲಾಗಿದೆ.
ಕಳೆದ ಕೆಲ ದಿನಗಳಿಂದ ಚಿರತೆಗಳು ತೋಟಗಳಿಗೆ, ಮನೆಗಳಿಗೆ ರಾತ್ರಿ ಸಮಯದಲ್ಲಿ ಬರುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಸಾಕಿದ ಜಾನುವಾರುಗಳು(Catles) ಮತ್ತು ಶ್ವಾನಗಳು(Dogs) ಹೊತ್ತೊಯ್ಯುತ್ತಿದೆ.
ಇದನ್ನು ಓದಿ : ದೆಹಲಿಯಲ್ಲಿ ಸ್ಪೋಟ. ಉತ್ತರಕನ್ನಡ ಜಿಲ್ಲೆಯಲ್ಲಿ ಬಿಗಿ ಭದ್ರತೆ. ಶ್ವಾನದಳದಿಂದ ಪರಿಶೀಲನೆ
ಅಪ್ಪನನ್ನೇ ಕೊ ಮಾಡಿ ಅರಣ್ಯದಲ್ಲಿ ಅಡಗಿದ್ದ ಆರೋಪಿ ಬಂಧನ.*
ಅನಾರೋಗ್ಯದ ನಡುವೆ ಓಡಾಟ ನಡೆಸುತ್ತಿರೋದ್ಯಾಕೆ? ಶಾಸಕ ಸತೀಶ ಸೈಲ್ ಗೆ ಗುರುವಾರದವರೆಗೆ ಜಾಮೀನು ವಿಸ್ತರಣೆ.

