ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮಂಗಳೂರು (Mangalore) : ಕಂಕನಾಡಿಯ(Kankanadi) ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ (Father Muller Hospital) ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ(Four childrens) ಜನ್ಮ(Birth) ನೀಡಿ ಆಶ್ಚರ್ಯ ಮೂಡಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.‌ ತೆಲಂಗಾಣದ(Telangana) ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳು. ಈ ನಾಲ್ಕು ಶಿಶುಗಳೂ ಆರೋಗ್ಯವಾಗಿವೆ. ಈ ಮಕ್ಕಳು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿವೆ.

ಪ್ರಸವ ಪೂರ್ವ ಜನನವಾಗಿದ್ದರಿಂದ ಸದ್ಯ ಮಕ್ಕಳಿಗೆ ಎನ್‌ಐಸಿಯುವಿನಲ್ಲಿ(NICU) ಚಿಕಿತ್ಸೆ ನೀಡಲಾಗುತ್ತಿದೆ.‌ ನಾಲ್ಕು ಮಕ್ಕಳ ಜನನ ಬಹಳ ಅಪರೂಪವಾಗಿದ್ದು, ಇದು 7,00,000 ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತದೆ ಎನ್ನಲಾಗಿದೆ.

ದಕ್ಷಿಣ ಕನ್ನಡ(Dakshinakannada) ಜಿಲ್ಲೆಯ ಇತಿಹಾಸದಲ್ಲಿ (History) ಇದೊಂದು ಅಪರೂಪದ ಹೆರಿಗೆಯಾಗಿದೆ. ಹೀಗಾಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಖುಷಿ ಪಟ್ಟಿದ್ದಾರೆ.

ಇದನ್ನು ಓದಿ : ಎಚ್ಚರ! ವೈರಸ್ ಬಗ್ಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ.

ಭಟ್ಕಳದಲ್ಲಿ ಬಸ್ ಹಾಯ್ದು ಪಾದಚಾರಿ ದುರ್ಮರಣ.

ಒಕ್ಕರಿಸಿತಾ ಚೀನಾ ವೈರಸ್. ರಾಜಧಾನಿ ಬೆಂಗಳೂರಲ್ಲಿ HMPV ಸೋಂಕು ಪತ್ತೆ.

ಮುರ್ಡೇಶ್ವರ ಹಾಗೂ ಇಡಗುಂಜಿಗೆ ನಟಿ ಪೂಜಾ ಗಾಂಧಿ ಭೇಟಿ.

ಹೊನ್ನಾವರದಲ್ಲಿ ಲಾರಿ ಪಲ್ಟಿ. ಇಬ್ಬರ ದುರ್ಮರಣ.

ಅವಿವಾಹಿತ ಜೋಡಿಗಳಿಗೆ ಹೋಟೆಲ್ ನಲ್ಲಿ ನೋ ಎಂಟ್ರಿ.