ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ತುಮಕೂರು (Tumkuru) : ರಾಸಾಯನಿಕ ಹಾಕಿ ಕೃಷಿ ಹೊಂಡದಲ್ಲಿ ಸ್ಪೋಟ ಮಾಡಿದ್ದ ಪ್ರಕರಣಕ್ಕೆ ​ಸಂಬಂಧಿಸಿ ಮಾಜಿ ಬಿಗ್​ಬಾಸ್ (BiggBoss) ಸ್ಪರ್ಧಿ ಡ್ರೋನ್​ ಪ್ರತಾಪ್​ (Drone Pratap)ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಫೋಟಕ ವಸ್ತುಗಳನ್ನ ಬಳಸಿ  ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಅವರನ್ನ ತುಮಕೂರು(Tumkuru) ಜಿಲ್ಲೆಯ ಮಧುಗಿರಿ(Madhugiri) ತಾಲೂಕಿನ ಮಿಡಿಗೇಶಿ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ವಿಡಿಯೋ ಆಧರಿಸಿ ಅವರ ಮೇಲೆ ​ ಮಿಡಿಗೇಶಿ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು  ವಿಚಾರಣೆ ನಡೆಸುತ್ತಿದ್ದಾರೆ.

ಡ್ರೋನ್ ಪ್ರತಾಪ್(Drone Pratap) ಕೃಷಿ ಹೊಂಡದಲ್ಲಿ ನೀರಿಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್‌ ಆಗಿತ್ತು. ಬೆಂಕಿ ಸಹ ಹೊರಹೊಮ್ಮಿತ್ತು.  ಬಾಂಬ್ ಬ್ಲಾಸ್ಟ್ ತರಹ  ದೃಶ್ಯ ಕಂಡು ಬಂದಿದ್ದರಿಂದ ಜನ ಕಂಗಾಲಾಗಿದ್ದರು. ದೃಶ್ಯದ ವಿಡಿಯೋವನ್ನ  ನಗುತ್ತಲೇ  ಮಾಡಿದ್ದ ಪ್ರತಾಪ್​​, ದೊಡ್ಡ ಬ್ಲಾಸ್ಟ್ ಇದು ಎಂದು ಕೂಗಿದ್ದರು. ಈ ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋಷಿಯಲ್​ ಮೀಡಿಯಾದಲ್ಲಿ ಬಾರೀ ವೈರಲ್ ಆಗಿತ್ತು.  ಕಿಡಿಗೇಡಿಗಳು ಇದೆ ರೀತಿ ಕೃತ್ಯ ಮಾಡಬಹುದು. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಅವರನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ

ಇದನ್ನು ಓದಿ : ವಿಶ್ವಕ್ಕೆ ಚೆಸ್ ಸಾಮ್ರಾಟನಾದ ಗುಕೇಶ್.

ಅಯ್ಯಪ್ಪ ವೃತಧಾರಿ ಬಾಲಕನ ಅಚ್ಚರಿ! ಮಾತು ಬಾರದವನಿಗೆ ಮಾತು ಬಂತು.

ಗೋಕರ್ಣದಲ್ಲಿ ವಿದೇಶಿ ಮಹಿಳೆಯ ರಕ್ಷಣೆ

ದಾಂಡೇಲಿಯಲ್ಲಿ ಮನೆ ನಿವೇಶನಕ್ಕಾಗಿ ಮತ್ತೆ ಹೋರಾಟಕ್ಕೆ ಕರೆ