ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) : ಸರ್ಕಾರಿ ಬಸ್(Government Bus) ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿಗಳು ಸೇರಿ‌ ಹಲವು ಪ್ರಯಾಣಿಕರು ಗಾಯಗೊಂಡ ‌ಘಟನೆ ಹಳಿಯಾಳ ತಾಲೂಕಿನ ‌ಬಾಣಸಗೇರಿ(Haliyal Taluku Banasageri) ಬಳಿ‌ ಸಂಭವಿಸಿದೆ.

ಅಪಘಾತದಲ್ಲಿ ವಿದ್ಯಾರ್ಥಿಯೋರ್ವನ ಎರಡು ಕಾಲು ಸಿಲುಕಿಕೊಂಡು ರಕ್ಷಣೆ ಮಾಡಲು ಹರಸಾಹಸ ಪಡುವಂತಾಯಿತು. ಕಲಘಟಗಿಯಿಂದ ಹಳಿಯಾಳಕ್ಕೆ(Kalaghatagi to Haliyal) ಕಡೆ   ಕೆಎಸ್‌ಆರ್‌ಟಿಸಿ ಬಸ್‌ ತೆರಳುತ್ತಿತ್ತು. ಹಳಿಯಾಳ–ಕಲಘಟಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ(Moorarji Desai Residence School) ಸಮೀಪವೇ ಈ ದುರ್ಘಟನೆ ನಡೆದಿದೆ.

ಕಾರೊಂದನ್ನ  ಓವರ್‌ಟೇಕ್ ಮಾಡಲು ಪ್ರಯತ್ನಿಸಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ 20ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್‌ನಲ್ಲಿ ಸುಮಾರು 40ಕ್ಕೂ ಅಧಿಕ ಪ್ರಯಾಣಿಕರಿದ್ದರು. ಗಾಯಗೊಂಡವರಲ್ಲಿ 8 ವಿದ್ಯಾರ್ಥಿನಿಯರು, 2 ಮಹಿಳೆಯರು, 2 ಶಾಲಾ ಮಕ್ಕಳು ಹಾಗೂ ಬಸ್ ಕಂಡಕ್ಟರ್ ಸೇರಿದ್ದಾರೆ. ಅಪಘಾತದ ರಭಸಕ್ಕೆ ಬಸ್ ನಲ್ಲಿ‌ ಸಿಲುಕಿಕೊಂಡ ಬಾಲಕನನ್ನು ರಕ್ಷಿಸಲು ಎರಡು ತಾಸು ಬೇಕಾಯಿತು.

ಗಾಯಾಳುಗಳನ್ನು ತಕ್ಷಣ ಹಳಿಯಾಳ ತಾಲೂಕು ಆಸ್ಪತ್ರೆಗೆ(Haliyal Taluku Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಪರಿಣಾಮ ಕೆಲಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.  ಸ್ಥಳಕ್ಕೆ ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.  ಈ ಬಗ್ಗೆ ಹಳಿಯಾಳ  ಪೊಲೀಸರು(Haliyal Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಸಾಮೂಹಿಕವಾಗಿ ಸರಳ ವಿವಾಹ ಮಾಡಿಸಿ ಪ್ರೋತ್ಸಾಹ ಧನ ಪಡೆಯಿರಿ.

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ‌ನಾಲ್ವರು ಮಕ್ಕಳ ದುರ್ಮರಣ.

ಹೊನ್ನಾವರದಲ್ಲಿ ಕಾರು ಪಲ್ಟಿ: ಇಬ್ಬರು ಸಜೀವ ದಹನ