ಕಾರವಾರ : ಪೋಲೀಸರ ಮನೆಯನ್ನ ಬಿಡದೆ ಕಳ್ಳರು ಕಳ್ಳತನ ಮುಂದುವರಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕೋಡಿಭಾಗದ ನಿವೃತ್ತ ಪೊಲೀಸರಾದ ಮಾರುತಿ ಅಪ್ಪು ನಾಯಕ ಅವರ ಮನೆಗೆ ರಾತ್ರಿ ಕಳ್ಳರು ಕನ್ನ ಹಾಕಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಕಪಟಿನಲ್ಲಿದ್ದ ಲಕ್ಷಾಂತರ ರೂ ನಗದು ಹಾಗೂ ಬಂಗಾರ ಕಳ್ಳತನ ಮಾಡಿದ್ದಾರೆ
ಮನೆಯ ಮುಂದಿನ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಕಳ್ಳರು ಹಾಗೆಯೇ ಬಂದು ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಶ್ವಾನ ದಳದಿಂದ ಪರಿಶೀಲನೆ ನಡೆದಿದೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.