ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ರಾಜ್ಯದ ಕರಾವಳಿ ಜಿಲ್ಲೆಯ ಅತಿ ದೊಡ್ಡ  ಜಾತ್ರೋತ್ಸವಗಳಲ್ಲಿ ಒಂದಾದ  ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ(Sidigadde Sri Mahasati Devi) ವಾರ್ಷಿಕ ಜಾತ್ರೋತ್ಸವ  ಅದ್ದೂರಿಯಿಂದ   ಆರಂಭಗೊಂಡಿದೆ.

ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ, ಹಾಲಹಬ್ಬದ(Halahabba) ಸೇವೆಯೊಂದಿಗೆ ಶುಕ್ರವಾರ ಅದ್ದೂರಿಯಾಗಿ ಚಾಲನೆ ಪಡೆದುಕೊಂಡಿತು. ಮಹಾಸತಿ ದೇವಿಗೆ(Mahasati Devi) ಮೊದಲ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ದರ್ಶನ–ಪೂಜೆಗೆ ಅವಕಾಶ ಕಲ್ಪಿಸಲಾಯಿತು.

ನೆರೆಯ  ದಕ್ಷಿಣ ಕನ್ನಡ(South Canara), ಉಡುಪಿ(Udupi) ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದಾರೆ.  ಜಾತ್ರೆಯ ಅಂಗವಾಗಿ ಇಂದು  ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಂಡಸೇವೆ ನಡೆಯಲಿದೆ. ಕೆಂಡ ಸೇವೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಮಹಾಸತಿ ದೇವಿಯ(Mahasati Devi) ಕೃಪೆಗೆ ಪಾತ್ರರಾಗಲಿದ್ದಾರೆ.

ದೇವಸ್ಥಾನದಲ್ಲಿ ತುಲಾಭಾರ ಸೇವೆಯೂ(Tulabara Seve) ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ಜಾತ್ರೆ ಜನವರಿ 31ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆ ಸಂಬೃಮದಿಂದ ನಡೆಯುವ ದೃಷ್ಟಿಯಿಂದ  ದೇವಸ್ಥಾನ ಅಭಿವೃದ್ಧಿ ಸಮಿತಿ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ.  ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದು ಕಾಳಜಿ ವಹಿಸುತ್ತಿದ್ದಾರೆ. ಜಾತ್ರೆಯ ಶಾಂತಿ ಮತ್ತು ಸುವ್ಯವಸ್ಥೆಗೆ ದೇವಸ್ಥಾನ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನು ಓದಿ : ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ಪ್ರಸಿದ್ದ ಆಸ್ಪತ್ರೆ ನೌಕರ ಆತ್ಮತ್ಯೆ*