ಶಿರಸಿ(Sirsi) :  ನಗರದಲ್ಲಿ ಧರ್ಮ ಸಮ್ಮೇಳನ(Religious Conference), ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸಂಕಲ್ಪ ಪೂಜೆ ಹಾಗೂ ಬುಡಕಟ್ಟು ಸಂಸ್ಕೃತಿ (ಲಂಬಾಣಿ) ಉತ್ಸವ  ಶ್ರೀ ಸೇವಾಲಾಲ್ ಸಂಸ್ಥಾನ ಬಂಜಾರ (Sevalala Samsthan Banjar) ಗುರುಪೀಠದ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು.

ಲೋಕಕಲ್ಯಾಣಾರ್ಥವಾಗಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ  ()Marikamba Templeಸಾಮೂಹಿಕ ಸಂಕಲ್ಪ ಪೂಜೆ ನೆರವೇರಿತು. ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸರ್ದಾರ ಸ್ವಾಮೀಜಿ, ಶಾಸಕ ಭೀಮಣ್ಣ ನಾಯ್ಕ, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಮುಂತಾದವರು ಪಾಲ್ಗೊಂಡರು.

ನಂತರ ಮೆರವಣಿಗೆಯ ಮೂಲಕ ಇಲ್ಲಿಯ ಅಂಬೇಡ್ಕರ್ ಭವನದವರೆಗೆ ಸಾಗಿದರು. ಈ ವೇಳೆ ಬಂಜಾರ ವಾದನಗಳು ಮೇಳೈಸಿದವು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಮೆರವಣಿಗೆ ಸಂದರ್ಭದಲ್ಲಿ ಭೇಟಿ ನೀಡಿದರು.

ಅಂಬೇಡ್ಕರ್ ಭವನದಲ್ಲಿ ನಡೆದ ಧರ್ಮಸಭೆಯಲ್ಲಿ ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸರ್ದಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಭಾರತ ಬಂಜಾರ ಸೇವಾಲಾಲ್ ರಾಷ್ಟ್ರೀಯ ಅಧ್ಯಕ್ಷ ಅಶ್ವತ್ಥ ನಾಯ್ಕ, ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಗೋವಿಂದ ಸ್ವಾಮಿ, ರಾಜ ನಾಯ್ಕ, ತಿಪ್ಪಣ್ಣ ನಾಯ್ಕ, ಬಾಲು ಚವ್ಹಾಣ, ರಾಜು ಚವ್ಹಾಣ, ಗಿರೀಶ ನಾಯ್ಕ, ಸುರೇಶ ನಾಯ್ಕ,  ರವೀಂದ್ರ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

ಇದನ್ನು ಓದಿ : ಕುಮಟಾದ ತೇಜಸ್ವಿನಿ ವೆರ್ಣೇಕರ ಗೆ ರಾಷ್ಟ್ರ ಮಟ್ಟದ ಸಂಗೀತ ಪ್ರಶಸ್ತಿ

ದಾಂಡೇಲಿಯಲ್ಲಿ ಹೊತ್ತಿ ಉರಿದ ದ್ವಿ ಚಕ್ರ ವಾಹನ

ಗೋವು ಕಳ್ಳರ ಬಂಧನ. ಸಖತ್ ಡ್ರಿಲ್