ಭಟ್ಕಳ (BHATKAL) : ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಗಣವೇಷಧಾರಿ ಸ್ವಯಂ ಸೇವಕರಿಂದ ನಗರದಲ್ಲಿ ಭವ್ಯ ಪಥಸಂಚಲನ ಸಂಪನ್ನಗೊಂಡಿತು.
ವಿಜಯದಶಮಿ (Vijayadashami) ಪ್ರಯುಕ್ತ ಸ್ವಯಂ ಸೇವಕರಿಂದ ನಡೆದ ಭವ್ಯ ಪಥಸಂಚಲನಕ್ಕೆ ನ್ಯೂ ಇಂಗ್ಲಿಷ್ ಶಾಲಾ(New English School) ಆವರಣದಲ್ಲಿ ಚಾಲನೆ ನೀಡಲಾಯಿತು. ಪಥ ಸಂಚಲನವು ಎರಡು ಮಾರ್ಗದಲ್ಲಿ ಸಂಚಾರ ಮಾಡಿತು. ಒಂದು ಪಥ ದಿ. ನ್ಯೂ. ಇಂಗ್ಲೀಷ್ ಸ್ಕೂಲ್ ಮಾರ್ಗವಾಗಿ ಸೋನಾರಕೇರಿ(Sonarakeri), ಆಸರಕೇರಿ(Asarakeri) ಮೂಲಕ ಮುಖ್ಯರಸ್ತೆ ಮುಖಾಂತರ ಮಾರಿಕಾಂಬ ದೇವಸ್ಥಾನ(Marikamba Temple), ರಥ ಬೀದಿ(Car Street)-ಹೂವಿನ ಪೇಟೆ (Flower Market)ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ಪುನಃ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಪಿ.ಎಲ್.ಡಿ ಬ್ಯಾಂಕ ನ(PLD Bank) ರಾಷ್ಟ್ರೀಯ ಹೆದ್ದಾರಿ (National Highway) ಮೂಲಕ ಭಟ್ಕಳ ಸರ್ಕಲ್ (Bhatkal Circle) ಪ್ರವೇಶಿಸಿತು.
ಇನ್ನೊಂದು ಮಾರ್ಗದ ಪಥ ದಿ. ನ್ಯೂ ಇಂಗ್ಲೀಷ್ ಸ್ಕೂಲ್ ಮೂಲಕ ಬಂದರ ರಸ್ತೆ(Bunder Road), ಭಟ್ಕಳ ಸರ್ಕಲ್, ಸಾಗರ ರಸ್ತೆ(Sagar Road), ನಾಯಕ ಹೆಲ್ತ್ ಸೆಂಟರ್(Nayak Health Center), ನಾಗಪ್ಪ ನಾಯಕ ರಸ್ತೆ(Nagappa Naik Road) ಮಾರ್ಗವಾಗಿ ಡಿ.ಪಿ ಕಾಲೋನಿ ರಸ್ತೆ (DP Colony)(ಸುದೀಂದ್ರ ಕಾಲೇಜು ಹಿಂಬಾಗ)-ಮೆಲ್‌ಹಿತ್ಲು ಮೂಲಕ ಹುರುಳಿಸಾಲ(Hurulisal) ಅಲ್ಲಿಂದ ಸಾರ್ವಜನಿಕ ಗಣೇಶೋತ್ಸವ ಭವನ, ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ -ಡಾ. ಚಿತ್ತರಂಜನ ಮನೆ(Dr Chittaranjan House) ಕ್ರಾಸ್, ಹಳೆ ವೈಭವ ಎದುರಗಡೆಯಿಂದ ಪುನ ಭಟ್ಕಳ ಸರ್ಕಲ್ ಪ್ರವೇಶಿಸಿತು. ಈ ವೇಳೆ ಎರಡು ಮಾರ್ಗದಿಂದ ಹೊರಟ ಪಥ ಸಂಚಲನವು ಸರ್ಕಲ್ ನಲ್ಲಿ ಏಕಕಾಲಕ್ಕೆ ತಲುಪಿ ಪುನಃ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿತು. ಪಥ ಸಂಚಲನ ಸಾಗುವ ಮಾರ್ಗದಲೆಲ್ಲ ಜನತೆ ನಿಂತು ಪುಷ್ಪ ವೃಷ್ಟಿ ಗೈದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya swayam Sevaka Sangha) ಉತ್ತರ ಪ್ರಾಂತ್ಯದ ಸಂಚಾಲಕ ಗೋಪಾಲ ಬಳ್ಳಾರಿ ಮಾತನಾಡಿದರು. ಈ ವೇಳೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಟ್ಕಳದ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.
ಭವ್ಯ ಪಥ ಸಂಚಲನದಲ್ಲಿ ಚಿಕ್ಕ ಮಕ್ಕಳು ಹಾಗೂ ನೆಹರೂ ರಸ್ತೆಯ ನಿವಾಸಿ 87 ವರ್ಷದ ವಿಠ್ಠಲ್ ರಾಮ ಪ್ರಭು ಎನ್ನುವ ವೃದ್ಧರು ಭಾಗಿಯಾಗಿರುವುದು ವಿಶೇಷವಾಗಿತ್ತು. ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಪಥ ಸಂಚಲನ ಹಿನ್ನಲೆ ಬಿಗಿ ಬಂದೋಬಸ್ತ್ : ಇನ್ನು ಪಥಸಂಚಲನದ ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್(Police Security) ಮಾಡಲಾಗಿತ್ತು. ಇಬ್ಬರು ಡಿ.ಎಸ್.ಪಿ, 7 ಪಿಐ, 27 ಪಿಎಸ್‌ಐ, 25 ಎ.ಎಸ್.ಐ, 309 ಹೆಡ್‌ಕಾನ್ಸ್‌ಟೇಬಲ್‌ಗಳು, ಕಾನ್ಸ್‌ಟೇಬಲ್‌ಗಳು, ಎರಡು ಕೆ.ಎಸ್.ಆರ್.ಪಿ, ಮತ್ತು 5 ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಇದಲ್ಲದೇ ಜಿಲ್ಲಾ ಉಪ ಪೊಲೀಸ ವರಿಷ್ಠಾಧಿಕಾರಿ, ಭಟ್ಕಳ ಡಿವೈಎಸ್ಪಿ ಕೆ ಮಹೇಶ, ಶಿರಸಿ ಡಿವೈಎಸ್ಪಿ ಕೆ.ಎಲ್ ಗಣೇಶ, ನಗರ ಠಾಣೆಯ ಸಿ.ಪಿ.ಐ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನು ಓದಿ : ಅಂಗನವಾಡಿಗೆ ಶೌಚಾಲಯ ಗುಂಡಿ ನಿರ್ಮಿಸಿಕೊಟ್ಟ ಮಾಸ್ತಪ್ಪಣ್ಣ