ಇ ಸಮಾಚಾರ ಡಿಜಿಟಲ್ ನ್ಯೂಸ್ (esamacharadigital news) ಶಿವಮೊಗ್ಗ(Shivamogga) : ಸೋಗಾನೆ ಬಳಿಯಿರುವ ಕೇಂದ್ರ ಕಾರಾಗೃಹದಲ್ಲಿ(Central Jail) ಖೈದಿಗಳ ಉಪಟಳ ಹೆಚ್ಚಾಗಿದೆ. ಕಾರಾಗೃಹ ಇಲಾಖೆ(Jail Department) ಡಿಜಿಪಿ ಅಲೋಕ್ ಕುಮಾರ್ ಅವರು ಇತ್ತೀಚೆಗಷ್ಟೇ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದ್ದರೂ, ಜೈಲಿನೊಳಗೆ ಅಕ್ರಮ ಚಟುವಟಿಕೆ ಮುಂದುವರಿದಿದೆ.
ಗಾಂಜಾ ಹಾಗೂ ಮೊಬೈಲ್ ಪೂರೈಕೆಯಾಗುತ್ತಿರುವುದು ಮತ್ತೆ ಗೊತ್ತಾಗಿದೆ. ಜೈಲಿನ ಗೇಟ್, ಬ್ಯಾಗ್ ಪರಿಶೀಲನೆ ಹಾಗೂ ಆಹಾರ ಪೂರೈಕೆಯಲ್ಲಿ ಕಠಿಣ ಕ್ರಮ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಖದೀಮರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಟೇಪ್ ಸುತ್ತಿದ ಗಾಂಜಾ ಹಾಗೂ ಮೊಬೈಲ್ಗಳನ್ನು ಕಾಂಪೌಂಡ್ ಗೋಡೆಯ ಮೇಲಿಂದ ಎಸೆದು ಕೈದಿಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ(Tunganagar Police Station) ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಟೇಪ್ ಸುತ್ತಿದ್ದ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ವಿಚರಣಾಧೀನ ಕೈದಿಗಳಾದ ಮೊಹಮದ್ ಖಲಂದರ್ ಹಾಗೂ ಅಬ್ದುಲ್ ಅಸೀಫ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊಹಮದ್ ಖಲಂದರ್ನಿಂದ 2 ಗೋಲ್ಡ್ ಫ್ಲೇಕ್ ಸಿಗರೇಟ್ ಪ್ಯಾಕ್ಗಳು, 1 ಮೊಬೈಲ್, 1 ಸಿಮ್ ಕಾರ್ಡ್ ಹಾಗೂ 170 ಗ್ರಾಂ ಗಾಂಜಾವನ್ನು ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನು ಅಬ್ದುಲ್ ಅಸೀಫ್ನಿಂದ ಲೈಟರ್ ಹಾಗೂ 230 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಕೈದಿಗಳ ಜೊತೆಗೆ ಇತರರ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ.
ಇದೇ ವೇಳೆ, ಜೈಲಿನ ಭದ್ರತಾ ವಿಭಾಗದಲ್ಲಿ ಬೀಗಮುದ್ರೆ ಸಮಯದಲ್ಲಿ ಒಳ ಆವರಣದಲ್ಲಿ ಮತ್ತೊಂದು ಟೇಪ್ ಸುತ್ತಿದ ಪ್ಯಾಕ್ ಪತ್ತೆಯಾಗಿದೆ. ಅನುಮಾನಾಸ್ಪದ ವಸ್ತುವನ್ನು(Suspect Things) ಪರಿಶೀಲಿಸಿದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ, ಅದರೊಳಗೆ ಮೊಬೈಲ್, 3 ಕಟ್ಟು ಬೀಡಿ, 3 ಸಿಗರೇಟ್ ಪ್ಯಾಕ್ಗಳು ಹಾಗೂ ಚಾರ್ಜಿಂಗ್ ಕೇಬಲ್ ಪತ್ತೆ ಮಾಡಿದ್ದಾರೆ.
ಈ ಸಂಬಂಧ ವಿರುದ್ಧ ಜೈಲ್ ಸೂಪರಿಂಟೆಂಡೆಂಟ್ ಪಿ. ರಂಗನಾಥ್ ಅವರು ದೂರು ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಪೊಲೀಸ್ ಇಲಾಖೆ(Police Department) ಕೈಗೊಂಡಿದೆ.
ಇದನ್ನು ಓದಿ : ಇಷ್ಟವಿಲ್ಲದ ಮದುವೆಗೆ ವಧುವೆ ವಿಲನ್. ಲವರ್ ಜೊತೆ ಆರೆಸ್ಟ್.
