ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರಕ್ಕೀಗ ನಾನೇ ಸಿಎಂ(Karwar CM). ಹಾಗಂತ ಸಿಎಂ ಡಿ ಕೆ ಶಿವಕುಮಾರ್(D K Shivakumar) ಅವರು ನನಗೆ ಅಧಿಕಾರ ನೀಡಿದ್ದಾರೆಂದು ಶಾಸಕ ಸತೀಶ್ ಸೈಲ್(MLA Satish Sail) ಹೇಳಿದ್ದಾರೆ.

ಗುರುವಾರ ಉತ್ತರಕನ್ನಡ(Uttarkannada) ಜಿಲ್ಲೆಗೆ ಆಗಮಿಸಿದ ‌ನೂತನ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ(Minister Laxman Savadi) ಅವರ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಸೈಲ್ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರೀಯಿಸಿದರು.

ಹಿಂದೆ ಡಿ.ಕೆ.ಶಿವಕುಮಾರ್(D K Shivakumar) ಅವರೇ ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ನೀಡುವುದಾಗಿ‌‌ ಹೇಳಿದ್ದರು. ಮೊದಲು ನನಗೆ ಬಾ ಎಂದು ಹೇಳಿ ನಂತರ ತ ಮೀನುಗಾರ ಸಮುದಾಯಕ್ಕೆ ಮೊದಲ‌ ಆದ್ಯತೆ ಕೊಡುವ ಅಂದ್ರು. ನಾನು ಸಿ.ಎಂ ಆದ್ರು ನೀನು‌ ಆದ್ರು ಏನು ವ್ಯತ್ಯಾಸ ಅಂದಾಗ ನಾನು ನಿಮ್ಮ ಜೊತೆ ಯಾವತ್ತು ಇರ್ತೇನೆ ಅಂದಿದ್ದೆ. ನಿನ್ನ ಕ್ಷೇತ್ರಕ್ಕೆ ಯಾವ ಕೆಲಸ ಆಗಬೇಕು‌ ಅದನ್ನು ಮಾಡಿಕೊಡ್ತೇನೆ ಎಂದು ನಿನ್ನೆ ಸಹ ಹೇಳಿದ್ರು ಎಂದು ಸೈಲ್ ಹೇಳಿದ್ದಾರೆ.

ನಾನು ಶಿರೂರು ಗುಡ್ಡ ಕುಸಿತ(Shiruru Landslide) ಸಂದರ್ಭದಲ್ಲಿ 72 ದಿನ ಕೆಲಸ ಮಾಡಿಲ್ವಾ. ಅದಕ್ಕಾದ್ರೂ ಸಚಿವ ಸ್ಥಾನ ಕೊಡಬೇಕಿತ್ತಲ್ವಾ‌ ಎಂದು ಪ್ರಶ್ನಿಸಿದ ಅವರು ಆದ್ರೆ ನನಗೆ ಯಾವುದೇ ಬೇಜಾರು ಇಲ್ಲ. ಇವತ್ತಿಗೂ ನಾನು ಕಾರವಾರ ಸಿ.ಎಂ. ಈ ಹಕ್ಕನ್ನು ನನಗೆ ನನ್ನ ಸಿ.ಎಂ ಕೊಟ್ಟಿದ್ದಾರೆಂದು ಶಾಸಕ ಸತೀಶ್ ಸೈಲ್(MLA Satish Sail) ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ(Uttarkannada District) ಯಾವೊಬ್ಬ ಶಾಸಕನಿಗೂ ಮಂತ್ರಿಸ್ಥಾನವನ್ನ ಸರ್ಕಾರ ನೀಡಿಲ್ಲ. ಭಟ್ಕಳ(Bhatkal) ಶಾಸಕ ಮಂಕಾಳ ವೈದ್ಯ(Mankal Vaidya) ಅವರಿಗೂ ದಕ್ಕಬೇಕಾದ ಅವಕಾಶವನ್ನು ಹೈಕಮಾಂಡ್ ಕಿತ್ತುಕೊಂಡಿದೆ. ಈ ಬಾರೀಯ ಸಚಿವ ಸಂಪುಟದಲ್ಲಿ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸೈಲ್ ಅವರಿಗೂ ನಿರಾಶೆಯಾಗಿದೆ. ಇನ್ನೂ ತಮ್ಮ ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ದಿ ಯೋಜನೆಗಳಿಗೆ ಶಾಸಕ ಸೈಲ್ ಹಲವು ಬೇಡಿಕೆಗಳನ್ನ ಸಿಎಂ ಮುಂದಿಟ್ಟಿರುವ ಬಗ್ಗೆ ತಿಳಿಸಿದ್ದಾರೆ.