ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangaluru) : ರಾಜ್ಯ ಸಂಪುಟ(State Cabinet) ವಿಸ್ತರಣೆಯಲ್ಲಿ ಕಾಂಗ್ರೆಸ್ ಉತ್ತರಕನ್ನಡ(Congres Uttarakannada) ಜಿಲ್ಲೆಗೆ ಕೈ ಕೊಟ್ಟಿದೆ. ಭಟ್ಕಳ ಶಾಸಕ(Bhatkal MLA) ಮಂಕಾಳು ವೈದ್ಯ(Mankal Vaidya) ಅವರ ಸಚಿವ ಸ್ಥಾನದ ಹೆಸರನ್ನ ಹೈಕಮಾಂಡ್ ಡಿಲೀಟ್ ಮಾಡಿದೆ.
ಕಳೆದ ಎರಡು ತಿಂಗಳಿಂದ ಅಳೆದು ತೂಗಿ ಸೋಮವಾರ ಬೆಳಿಗ್ಗೆ ಬಿಡುಗಡೆಗೊಳಿಸಿದ ನೂತನ ಸಚಿವರ ಮೊದಲ ಅಧಿಕೃತ ಪಟ್ಟಿಯಲ್ಲಿ ಮಂಕಾಳು ವೈದ್ಯ(Mankal Vaidya) ಅವರ ಹೆಸರು ಪ್ರಕಟಗೊಂಡಿತ್ತು. ಉತ್ತರಕನ್ನಡ ಜಿಲ್ಲೆಯ ಅವರ ಬೆಂಬಲಿಗರಲ್ಲಿ ಸಂತಸ ಉಂಟಾಗಿತ್ತು. ಆದರೆ ತೆರೆಯ ಮರೆಯಲ್ಲಿ ನಡೆದ ಆಟದಲ್ಲಿ ಮಂಕಾಳು ವೈದ್ಯ ಅವರ ಹೆಸರು ಬದಲಾಗಿ ಎಸ್. ಎಸ್. ಮಲ್ಲಿಕಾರ್ಜುನ್(S S Msllikarjun) ಅವರ ಹೆಸರನ್ನು ಸೇರಿಸಲಾಗಿದೆ.
ಗಡಿಬಿಡಿಯಲ್ಲಿ ಕಣ್ತಪ್ಪಿನಿಂದಾಗಿ ಮಂಕಾಳು ವೈದ್ಯ ಅವರು ಟೈಪಿಂಗ್ ಮಿಸ್ಟೇಕ್ ಆಗಿ ಮುದ್ರಣಗೊಂಡಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಿದೆ.
.
ಆದರೆ ಈ ಸಂಪುಟ ಸೇರಿಸಿಕೊಳ್ಳಲು ಜಿಲ್ಲೆಯ ಹಿರಿಯ ರಾಜಕಾರಣಿ ಆರ್. ವಿ. ದೇಶಪಾಂಡೆ(R V Deshapande) ಹಾಗೂ ಕಾರವಾರ ಶಾಸಕ ಸತೀಶ್ ಸೈಲ್(Satish Sail) ಬಾರೀ ಕಸರತ್ತು ನಡೆಸಿದ್ದರು. ಬೆಳಿಗ್ಗೆ ಪಟ್ಟಿ ಬಿಡುಗಡೆಯಾದಾಗ ಮಾಂಕಾಳ್ ಅವರ ಹೆಸರು ನೋಡಿದಾಗ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಸುದೀರ್ಘ ಅನುಭವ ಹೊಂದಿರುವ ದೇಶಪಾಂಡೆ ಅವರಿಗೆ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದ ಬೆನ್ನಲ್ಲೇ, ಈಗ ಮಂಕಾಳು ವೈದ್ಯ ಅವರಿಗೂ ಸಚಿವ ಸ್ಥಾನ ತಪ್ಪುತ್ತಿರುವ ವದಂತಿಗಳು ಇಡೀ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಗಾಲಾಗಿಸಿವೆ. ಮೊದಲು ಹೆಸರು ಪ್ರಕಟವಾಗದಿದ್ದಾರೆ ಬೇಸರವಿಲ್ಲವಾಗಿತ್ತು. ಆದರೆ ಪ್ರಕಟಿಸಿ ಹಿಂದೆಗೆದುಕೊಂಡಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದು ವೈದ್ಯ ಅವರ ಅಭಿಮಾನಿಗಳ ಮಾತಾಗಿದೆ.
ಪಕ್ಷದ ಹೈಕಮಾಂಡ್ ನಾಯಕರು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವಾಗ ಜಾತಿ, ಧರ್ಮ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಹಾಗೂ ವಿವಿಧ ಸಾಮಾಜಿಕ ವರ್ಗಗಳ ನಡುವಿನ ಸಮತೋಲನವನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former CM Siddaramaiha) ಸಂಪುಟದಲ್ಲಿದ್ದ ಆರು ಮಂದಿಗೆ ಪುನಃ ಅವಕಾಶ ಕಲ್ಪಿಸಿಕೊಡಲಾಗಿದೆ.
ಜಿ . ಎಸ್. ಪಾಟೀಲ್ ಅವರಿಗೆ ಸ್ಪೀಕರ್ ಹಾಗೂ ಪೊನ್ನಣ್ಣ ಅವರಿಗೆ ಉಪ ಸಭಾಧ್ಯಕ್ಷ ಸ್ಥಾನ ಒಲಿಯಲಿದೆ. ಇನ್ನೂ ವಿಧಾನ ಪರಿಷತ್ನ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಈ ಬಾರಿ ಮಾಜಿ ಸಚಿವೆ ಲಕ್ವ್ಮೀ ಹೆಬ್ಬಾಳ್ಕರ್ ಹಾಗೂ ಎಂ ಸಿ ಸುಧಾಕರ್ ಅವರಿಗೆ ಭಾರಿ ನಿರಾಸೆ ಉಂಟಾಗಿದೆ.
