ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಜ್ಯ ಸಂಪುಟ(State Cabinet) ವಿಸ್ತರಣೆಯಾದ ಬೆನ್ನಲ್ಲೆ ಅಸಮಧಾನದ ಹೊಗೆ ಆಡುತ್ತಿದೆ. ಉತ್ತರಕನ್ನಡ(Uttarkannada) ಜಿಲ್ಲೆಯ ಯಾವೊಬ್ಬ ಶಾಸಕನಿಗೂ ಸಚಿವ ಸ್ಥಾನ ನೀಡದಿರುವುದಕ್ಕೆ ಜನತೆ ಒಳಗೊಳಗೆ ಕುದಿಯುತ್ತಿದ್ದಾರೆ. ಹೀಗಾಗಿ ಸಿಎಂ ಡಿ ಕೆ ಶಿವಕುಮಾರ್(CM D K Shivakumar) ಮುಂದಾಗಬಹುದಾದ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

ಮೊನ್ನೆಯಷ್ಟೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ಕಾರ್ಯಪ್ರವತ್ತರಾಗುವಂತೆ ಸೂಚಿಸಿದ್ದಾರೆ. ಸಂಪುಟ ದರ್ಜೆ ಸಚಿವರಾದ ಲಕ್ಷ್ಮಣ ಸವದಿ(Minister Laksman Savadi) ಅವರನ್ನು ಉತ್ತರಕನ್ನಡ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗದೆ. ನಾಳೆ(ಆಗಸ್ಟ್ 6)ಯಿಂದ ಎರಡು ದಿನಗಳ ಕಾಲ ಉತ್ತರ ಕನ್ನಡ(Uttarkannada) ಜಿಲ್ಲೆಯಾದ್ಯಂತ ಲಕ್ಷ್ಮಣ ಸವದಿ ಪ್ರವಾಸ ಕೈಗೊಳ್ಳಲಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳನ್ನು ಖುದ್ದಾಗಿ ವೀಕ್ಷಿಸಲು ಮತ್ತು ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಸಚಿವರ ಪ್ರವಾಸ ಕಾರ್ಯಕ್ರಮ :
ಆಗಸ್ಟ್ 6ರಂದು ಬೆಳಿಗ್ಗೆ 10.30ಕ್ಕೆ ಕಾರವಾರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿಗೆ(Karwar Congress Office) ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11.00ಕ್ಕೆ ಕಾರವಾರದ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಬಳಿಕ ಮಧ್ಯಾಹ್ನ 12.00 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

  ಮಧ್ಯಾಹ್ನ 3.00ಕ್ಕೆ ಅಂಕೋಲಾ(Ankola) ತಾಲೂಕಿನ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಂಜೆ 5.00ಕ್ಕೆ ಹೊನ್ನಾವರಕ್ಕೆ ಆಗಮಿಸಿ, ಕುಮಟಾ(Kumta), ಹೊನ್ನಾವರ ಮತ್ತು ಭಟ್ಕಳ(Honnavar and Bhatkal) ತಾಲೂಕುಗಳ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಹೊನ್ನಾವರದ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ಸಭೆ ಮತ್ತು ಆಯ್ದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ರಾತ್ರಿ 8.30ಕ್ಕೆ ಶಿರಸಿಗೆ(Sirsi) ಆಗಮಿಸಿ ಅಲ್ಲಿನ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಆಗಸ್ಟ್ 7ರಂದು ಶಿರಸಿ(Dirsi), ಮುಂಡಗೋಡ(Mundgod) ಹಾಗೂ ಹಳಿಯಾಳ(Haliyal) ಭಾಗದ ಪ್ರವಾಸದಲ್ಲಿ ಪ್ರವಾಸ ಕೈಗೊಳ್ಳುವ ಸಚಿವರು ಬೆಳಿಗ್ಗೆ 9.30ಕ್ಕೆ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಬೆಳಿಗ್ಗೆ 10.00ಕ್ಕೆ ಶಿರಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ, ಬೆಳಿಗ್ಗೆ 10.30ಕ್ಕೆ ಶಿರಸಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಿರಸಿ ಹಾಗೂ ಸಿದ್ದಾಪುರ(Sirsi and Siddapur) ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಶಿರಸಿ ತಾಲೂಕಿನ ಆಯ್ದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.00 ಗಂಟೆಗೆ ಶಿರಸಿ ತಾಲೂಕಿನ ಬನವಾಸಿ(Banavasi) ಭಾಗದ ಆಯ್ದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.00ಕ್ಕೆ ಮುಂಡಗೋಡದ(Mundgod) ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ಯಲ್ಲಾಪುರ(Yallapur) ಮತ್ತು ಮುಂಡಗೋಡ ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ಮತ್ತು ವೀಕ್ಷಣೆ ನಡೆಸಲಿದ್ದಾರೆ.

ಸಂಜೆ 4.30ಕ್ಕೆ ಹಳಿಯಾಳದ ಪುರಭವನ(Haliyal Purabhavan) ಸಭಾಂಗಣದಲ್ಲಿ ಹಳಿಯಾಳ, ದಾಂಡೇಲಿ ಮೊನ್ನೆಯಷಗ(Dandeli and joida) ತಾಲೂಕುಗಳ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ಮತ್ತು ಆಯ್ದ ಪ್ರದೇಶಗಳ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6.00ಕ್ಕೆ ಹಳಿಯಾಳದಿಂದ ರಸ್ತೆ ಮೂಲಕ ಧಾರವಾಡ(Dharwad) ಮಾರ್ಗವಾಗಿ ಪ್ರಯಾಣ ಬೆಳೆಸಿ, ರಾತ್ರಿ 7.30ಕ್ಕೆ ಬೆಳಗಾವಿ ತಲುಪಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.