ಇ ಸಮಾಚಾರ ಡಿಜಿಟಲ್ ನ್ಯೂಸ್(esamacharadigital news) ಸಿದ್ದಾಪುರ(Siddapur) : ಪತಿಯಿಂದ ದೂರವಾದ ಪತ್ನಿಯೊಬ್ಬಳು  ಮಗಳ ವಿಚಾರದಲ್ಲಿ ಗಲಾಟೆ ತೆಗೆದು ಯುವಕರ ಗುಂಪಿನಿಂದ ಭಾವನನ್ನೆ ಕೊಲೆ ಮಾಡಿಸಿದ ಘಟನೆ ಸಿದ್ದಾಪುರದ ಅವರಗುಪ್ಪದಲ್ಲಿ(Siddapura Avaraguppa) ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ವಸಂತ ನಾಯ್ಕ (41) ಎಂದು ಗುರುತಿಸಲಾಗಿದೆ. ಗಾಯಗೊಂಡ ವಸಂತ ನಾಯ್ಕ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ(Shivamogga) ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಶಿವಮೊಗ್ಗದಲ್ಲಿ ಕಮಲಾಕರ ಭಟ್  ಜ್ಯೋತಿಷಿಯೊಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಚಿತ್ರಾ ಎಂಬ ಮಹಿಳೆ, ತನ್ನ ಪತಿ ಮಹೇಶನಿಂದ ಹಲವು ವರ್ಷಗಳಿಂದ ದೂರವಾಗಿದ್ದಳು. ಕಳೆದ ಆರು ತಿಂಗಳಿಂದ ಕಮಲಾಕರ ಜೊತೆ ಸಂಬಂಧ ಇಟ್ಟುಕೊಂಡ ಸುಚಿತ್ರಾ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನ ಇರಿಸಿಕೊಂಡಿದ್ದಳು ಎನ್ನಲಾಗಿದೆ.

ತಾಯಿಯ ವರ್ತನೆ ಸಹಿಸದ ಮಗಳು ತಂದೆಗೆ ಕಾಲ್ ಮಾಡಿ ‘ಪಪ್ಪಾ ನನ್ನನ್ನ ಕರೆದುಕೊಂಡು ಹೋಗು’ ಎಂದಿದ್ದಳು. ಆಗ ಬಸ್ ಮೆಲೆ ಬಾ ಎಂದು ತಂದೆ ಹೇಳಿದ್ದರಂತೆ. ಹೀಗಾಗಿ  ನಿನ್ನೆ ಮಧ್ಯಾಹ್ನ ಬಸ್ ಮೇಲೆ ಬಂದಿದ್ದಳು. ಮಗಳು ಏಕಾಏಕಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಸುಚಿತ್ರಾ, ಮಗಳು ವಸಂತ ನಾಯ್ಕ ಅವರ ಮನೆಯಲ್ಲಿ ಇರುವುದನ್ನು ತಿಳಿದುಕೊಂಡಿದ್ದಾಳೆ.

ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಅವರ ವಾಹನದಲ್ಲಿ ಯುವಕರ ಗುಂಪೊಂದನ್ನು ಕರೆದುಕೊಂಡು ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮಕ್ಕೆ ಬಂದಿದ್ದಾಳೆ. ಮಗಳನ್ನು ಕರೆದೊಯ್ಯಲು ಪ್ರಯತ್ನಿಸಿದ ವೇಳೆ ಮಾತಿನ ಚಕಮಕಿ ನಡೆದು, ಗಲಾಟೆ ತಡೆಯಲು ಮುಂದಾದ ವಸಂತ ನಾಯ್ಕ ಅವರಿಗೆ ಯುವಕರ ಗುಂಪು ಚಾಕುವಿನಿಂದ ಇರಿದಿದೆ.

ಇದೇ ವೇಳೆ ತಡೆಯಲು ಬಂದ  ಮಹೇಶ್ ಮತ್ತು ಊರಿನ  ಕುಮಾರ ಎಂಬವರಿಗೂ ಗಾಯಗಳಾಗಿವೆ ಅವರನ್ನ ಶಿವಮೊಗ್ಗದ ಆಸ್ಪತ್ರೆಗೆ(Shivamogga Hospital) ದಾಖಲಿಸಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಈ ಪ್ರಕರಣದ ಹಿಂದೆ ಅಕ್ರಮ ಸಂಬಂಧವೂ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಸುಚಿತ್ರಾ ಮತ್ತು ಕಮಲಾಕರ ಜ್ಯೋತಿಷಿ ನಡುವೆ ಅಕ್ರಮ ಸಂಬಂಧವಿದ್ದು, ಇತ್ತೀಚಿನ ದಿನಗಳಲ್ಲಿ ಸುಚಿತ್ರಾ ಕಮಲಾಕರ ಜೊತೆ ವಾಸವಾಗಿದ್ದಳು ಎನ್ನಲಾಗಿದೆ. ಸುಚಿತ್ರಾಳ ನಡವಳಿಕೆ ಸರಿಯಿಲ್ಲವೆಂದು ಆರೋಪಿಸಿ ಆಕೆಯ ಮಗಳು ತಂದೆಯ ಬಳಿ ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಂಬಂಧ ಸುಚಿತ್ರಾ, ಕಮಲಾಕರ ಜ್ಯೋತಿಷಿ ಸೇರಿದಂತೆ ಏಳು ಮಂದಿಯನ್ನು ಸಿದ್ದಾಪುರ ಪೊಲೀಸರು(Siddapura Police) ವಶಕ್ಕೆ ಪಡೆದಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸ್ಥಳಕ್ಕೆ ಐಜಿಪಿ ಅಮಿತ್ ಸಿಂಗ್(IGP Amit Singh),  ಎಸ್ಪಿ ದೀಪನ್(SP Deepan) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಕ್ಷೀಪ್ರಗತಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ :

ಜೈಲಿನಲ್ಲಿ ನಿಲ್ಲದ ಖೈದಿಗಳ ಉಪಟಳ. ಕೇಂದ್ರ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪೂರೈಕೆ

ಇಷ್ಟವಿಲ್ಲದ ಮದುವೆಗೆ ವಧುವೆ ವಿಲನ್. ಲವರ್ ಜೊತೆ ಆರೆಸ್ಟ್.