ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಸಿದ್ದಾಪುರ(Siddapura) : ತಾಲೂಕಿನ ಅವರಗುಪ್ಪದಲ್ಲಿ ನಡೆದ ಕೊಲೆ ಆರೋಪಿಗಳು ಜೈಲು ಪಾಲಾಗಿದ್ದಾರೆ. ಫೆಬ್ರುವರಿ 11ರವರೆಗೆ ನ್ಯಾಯಾಂಗ ಬಂಧನ(Judicial custody) ವಿಧಿಸಲಾಗಿದೆ.

ಫೆಬ್ರುವರಿ ಎರಡರ ರಾತ್ರಿ ಅವರಗುಪ್ಪಕ್ಕೆ(Avaraguppa) ಬಂದಿದ್ದ  ಸುಚಿತ್ರಾ ನಾಯ್ಕ ಮತ್ತು ಕಮಲಾಕರ ಭಟ್ ಪ್ಲ್ಯಾನ್ ಮಾಡಿ ಬಂದಿದ್ದರು. ತನ್ನ ಮಗಳನ್ನ ಕಸಿದುಕೊಳ್ಳುವ ಪ್ರಯತ್ನದಲ್ಲಿ ಆಕೆಯ ಜೊತೆ ಬಂದಿದ್ದ ಇತರರು ವಸಂತ ನಾಯ್ಕ ಅವರನ್ನ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.

ತಾಯಿ ಸುಚಿತ್ರಾಳ  ಟಾರ್ಚರ್(Torture) ತಡೆಯಲಾರದೇ ತಂದೆ ಇರುವಲ್ಲಿ ಓಡಿ ಬಂದಿದ್ದಾಳೆ. ಅಲ್ಲದೇ ಮಕ್ಕಳ ರಕ್ಷಣಾ ಸಮಿತಿ ಮುಂದೆ ತನಗಾದ ಹಿಂಸೆಯ ಬಗ್ಗೆ ದೂರು ನೀಡಿದ್ದಳು. ಇದು ಸುಚಿತ್ರಾಳ ಪಿತ್ತ ನೆತ್ತಿಗೆರಿತ್ತು. ಅದೇ ಸಿಟ್ಟಿನಲ್ಲಿ ತಂದೆ ಲೋಕನಾಥ ನಾಯ್ಕ, ಕಮಲಾಕರ ಭಟ್, ಆಕಾಶ ನಾವಟಿ, ಇನ್ನೂ ಮೂವರಾದ ಮಹಮದ್ ಮೈಪೂಜ್, ಪೈಸಲ್ ಮತ್ತು ಇರ್ಪಾನ್ ಜೊತೆ ಬಂದಿದ್ದಳು.
ವಸಂತ ನಾಯ್ಕ ಕೊಲೆಗೈದು ಸುಚಿತ್ರಾ ಪತಿ ಮಹೇಶ ನಾಯ್ಕ, ಪಕ್ಕದ ಮನೆಯ ಕುಮಾರ ಅವರಿಗೂ ಇರಿದು ಪರಾರಿಯಾಗಿದ್ದರು.

ಆ ವೇಳೆ  ಸ್ಥಳೀಯರ ಕೈಗೆ ಸಿಕ್ಕ ಸುಚಿತ್ರಾ ಹಾಗೂ ಆಕೆಯ ತಂದೆಗೆ ಧರ್ಮದೇಟು ತಿನ್ನುವ  ವಿಡಿಯೋ ವೈರಲ್(Video Viral) ಆಗಿದೆ. ಅವರಗುಪ್ಪದ ವಸಂತ ನಾಯ್ಕ ಹತ್ಯೆಯನ್ನ ಖಂಡಿಸಿ ಕುಟುಂಬದವರು ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಸರ್ಕಾರದಿಂದಲ್ಲ. ಸುಚಿತ್ರಾ ಹಾಗೂ ಕಮಲಾಕರ ಭಟ್ ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬಂಧಿತಳಾಗಿರುವ  ರೀಲ್ಸ್ ರಾಣಿ(Reals Rani) ಸುಚಿತ್ರಾ ಅವರ ಒಂದೊಂದೇ ರೀಲ್ಸ್ ವಿಡಿಯೋ ವೈರಲ್ ಆಗುತ್ತಿದೆ. ಸ್ವಂತ ಗಂಡನನ್ನೆ ಮುಗಿಸಲು ಬಂದಿದ್ದ ಸುಚಿತ್ರಾ ಮತ್ತು ಕಮಲಾಕರ ಭಟ್(Kamalakar Bhat) ಸೇರಿ ಎಳು ಜನರು ಕಂಬಿ ಎಣಿಸುವಂತಾಗಿದೆ. ಇನ್ನೊಬ್ಬರ ಜ್ಯೋತಿಷ್ಯ(Astrology) ಹೇಳುವ ಕಮಲಾಕರ ಭಟ್, ಸುಚಿತ್ರಾ ಸಹವಾಸ ಮಾಡಿ ಜೈಲೂಟ ತಿನ್ನಬೇಕಾಗಿದೆ.

ಇದನ್ನು ಓದಿ : ಭಟ್ಕಳ ಆಟೋ ಚಾಲಕನ ಮಾನವೀಯತೆ. ಬಂಗಾರವಿದ್ದ ಬ್ಯಾಗ್ ಮರಳಿ ಪ್ರಯಾಣಿಕರಿಗೆ.

ಮುರ್ಡೇಶ್ವರದಲ್ಲಿ  ನಿವತ್ತ ಯೋಧನಿಗೆ ಅದ್ದೂರಿ ಸ್ವಾಗತ. ಎಲ್ಲೆಡೆ ಜಯಕಾರ.

ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ವಿಧಿವಶ. ಕಂಬನಿ ಮಿಡಿದ ಸಹದ್ಯೋಗಿಗಳು.

Iಪತಿ–ಪತ್ನಿ ಕಲಹ.  ತಾಯಿಯೊಂದಿಗೆ ಇರಲು ಬಯಸದ ಮಕ್ಕಳು. ಭಾವನ ಮುಗಿಸಿದ ಕಿರಾತಕಿ.