ಶಿರಸಿ: ಅಧಿಕ ಪ್ರಖರತೆಯ ಎಲ್‌ಇಡಿ ಲೈಟ್ ಗಳನ್ನು ಬಳಸುವ ವಾಹನ ಸವಾರರ ಮೇಲೆ ಶಿರಸಿ ಪೊಲೀಸರು ಕಾರ್ಯಚರಣೆಗೆ ಮುಂದಾಗಿದ್ದಾರೆ.

ದೋಷಪೂರಿತ ಎಲ್ಇಡಿ ಲೈಟ್ ಬಳಸಿದ ವಾಹನ ಸವಾರನೊರ್ವನಿಗೆ ಐದು  ಸಾವಿರ ರೂ ದಂಡ ವಿಧಿಸಿದ್ದಾರೆ.  ಎಲ್ ಇ ಡಿ ಲೈಟ್ ಹಾಕಿ ವಾಹನ ಚಲಾಯಿಸುವ ಪರಿಣಾಮವಾಗಿ ಎದುರು ಬರುವ ವಾಹನ ಸವಾರರಿಗೆ ಕಣ್ಣು ಕುಕ್ಕಿ ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಎಲ್ಲೆಡೆ ಎಲ್ಇಡಿಯಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ  ಪಿಎಸ್‌ಆಯ್ ನಾಗಪ್ಪ ಅವರು ಕಾರ್ಯಚರಣೆಗೆ ಇಳಿದಿದ್ದಾರೆ.

ಇನ್ಮುಂದೆ ಹೆಚ್ಚಿನ ಪ್ರಖರತೆಯ ಲೈಟ್ ಅಳವಡಿಸಿ ವಾಹನ ಓಡಿಸುವವರು ಎಚ್ಚರ ವಹಿಸೋದು ಒಳಿತು. ಪೊಲೀಸರ ಕಾರ್ಯಚರಣೆಗೆ  ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.