ಕಾರವಾರ(Karwar) : ನಗರದ ಅಲಿಗದ್ದಾ ಕಡಲತೀರದ(Aligadda Beach) ಸಮೀಪ ಇರುವ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ(Fisharies Department Ad Office) ಕಚೇರಿಯನ್ನು ಸ್ಥಳಾಂತರ ಮಾಡಬಾರದು ಎಂದು ಮೀನುಗಾರರು ಮತ್ತು ಮೀನುಗಾರರ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ನೀಡಿದೆ.

ಹಿಂದೆ ಮೀನುಗಾರಿಕೆಯ ಹಲವು ಕಚೇರಿಗಳು ಕಾರವಾರದ(Karwar) ಕಡಲ ತೀರದಲ್ಲಿ ಇದ್ದವು. ಕಾರಣಾಂತರದಿಂದ ನಗರದ ಅಲಿಗದ್ದಾ ಕಡಲ ತೀರದಲ್ಲಿರುವ ಮೀನುಗಾರಿಕೆ ಇಲಾಖೆಯ ಒಂದೊಂದೇ ಕಚೇರಿಗಳು ಹಬ್ಬುವಾಡಾಕ್ಕೆ (Habbuwada) ಸ್ಥಳಾಂತರಗೊಳ್ಳುತ್ತಿವೆ. ಇದರಿಂದಾಗಿ ಮೀನುಗಾರರು ಮೀನುಗಾರಿಕೆ ಜಂಟಿ ನಿರ್ದೇಶಕರ (Fisharies Joint Director) ಕಚೇರಿಗೆ ಮತ್ತು ಇತರ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಕಾರವಾರ ಮತ್ತು ಇತರೆ ಭಾಗದಿಂದ ಬರುವ ಮೀನುಗಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಲಿಗದ್ದಾದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಗೆ ಬರುತ್ತಿದ್ದರು. ಆದರೆ ಆ ಕಚೇರಿಗಳ ಸ್ಥಳಾಂತರದಿಂದಾಗಿ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ(DC Lakshmipriya) ಅವರಿಗೆ ತಿಳಿಸಿದೆ.

ಹಬ್ಬುವಾಡದಲ್ಲಿರುವ ಮೀನುಗಾರಿಕೆ ಕಚೇರಿಗೆ ತೆರಳಲು  ಬಡ ಮೀನುಗಾರರ ಸಮಯ ಮತ್ತು ಹಣವು ವ್ಯರ್ಥವಾಗುತ್ತಿದೆ. ಅಲ್ಲದೇ ಮೀನುಗಾರಿಕೆ ಇಲಾಖೆ ಹಬ್ಬುವಾಡಕ್ಕೆ ಸ್ಥಳಾಂತರಗೊಳ್ಳಲು ಅಧಿಕಾರಿಗಳು ನೀಡುವ ಕಾರಣವು ಸಮರ್ಪಕವಾಗಿರುವುದಿಲ್ಲ. ಕಟ್ಟಡದಲ್ಲಿ ಸೋರುವ ಕಾರಣಕ್ಕಾಗಿ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರಾದರೂ ಇಲಾಖೆಯಿಂದ ಅದನ್ನು ದುರಸ್ತಿ ಮಾಡಿಸಿಕೊಳ್ಳಬಹುದು. ಮೀನುಗಾರರಿಗಾಗಿ ಮತ್ತು ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶ ಹೊಂದಿರುವ ಮೀನುಗಾರಿಕಾ ಇಲಾಖೆ ಮೀನುಗಾರರ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಕಚೇರಿಯನ್ನು ಸ್ಥಳಾಂತರಿಸಲು ಮುಂದಾಗಿರುವುದು ಖಂಡನೀಯ ಎಂದು ಸಂಘಟನೆಗಳು ಹೇಳಿವೆ.

ಹೀಗಾಗಿ ಪ್ರಸ್ತಾವನೆಯನ್ನು ಕೈಬಿಟ್ಟು ಮೀನುಗಾರಿಕೆ ಕಚೇರಿ ಈ ಮೊದಲು ಇರುವ ಅಲಿಗದ್ದಾದ ಬಳಿಯೇ ಇರುವಂತಾಗಬೇಕು. ಹಾಗಾದರೆ ಮಾತ್ರ ಈ ಕಚೇರಿಗಳಿಂದ ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಒಂದೊಮ್ಮೆ ಸ್ಥಳಾಂತರಕ್ಕೆ ಮುಂದಾದಲ್ಲಿ  ಮೀನುಗಾರರೆಲ್ಲ ಒಂದಾಗಿ  ತಮ್ಮ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಜೇಶ್ ಮಾಜಾಳಿಕರ, ಪ್ರಕಾಶ್ ಹರಿಕಂತ್ರ, ಚೇತನ್ ಹರಿಕಂತ್ರ, ಚಿತ್ತಾಕುಲ ಗ್ರಾಮ .ಪಂ ಸದಸ್ಯ ಸುಭಾಷ್ ದುರ್ಗೆಕರ್, ರೋಶನ್, ದೇವರಾಯ್ ಸೈಲ್, ಶ್ರೀಪಾದ್ ಕೊಬ್ರೇಕರ್, ಸುಶೀಲ ಹರಿಕಂತ್ರ ಸೇರಿದಂತೆ ಹಲವರು ಇದ್ದರು.

ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಸಕರ ಕಾರು – ಬೈಕ್ ಅಪಘಾತ

ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿರುವ ಖಾಸಗಿ ಬಸ್ ಪಲ್ಟಿ.

ಅರಬ್ಬೀ ಸಮುದ್ರದಲ್ಲಿ ಆಯಾ ತಪ್ಪಿ ಬಿದ್ದ ಮೀನುಗಾರ.  ಮೃತದೇಹಕ್ಕಾಗಿ ಮೀನುಗಾರರ ಕಾರ್ಯಾಚರಣೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಕದ್ದು ಎಸ್ಕೇಪ್ ಆಗಲು ವಿಫಲ ಪ್ರಯತ್ನ.