ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಗೋಕರ್ಣ(Gokarn) :  ಉತ್ತರಕನ್ನಡ ಜಿಲ್ಲೆಯ  ಧಾರ್ಮಿಕ ಸ್ಥಳಗಳಲ್ಲಿ ಶಿವರಾತ್ರಿ ಹಬ್ಬದ ಸಂಭೃಮ(Shivarstri Celebration) ಕಳೆಕಟ್ಟಿದೆ. ಗೋಕರ್ಣ(Gokarn), ಮುರ್ಡೇಶ್ವರ(Murdeshwar) , ಯಾಣ(Yaana), ಕವಳೇಶ್ವರ(Kavaleshwara) ಸೇರಿದಂತೆ ಪಂಚಕ್ಷೇತ್ರಗಳಲ್ಲಿ(Panchakshetra)  ಶಿವನನ್ನ ಆರಾಧಿಸುತ್ತಿದ್ದಾರೆ.

 ದಕ್ಷಿಣದ ಕಾಶಿ ಪುರಾಣ ಪ್ರಸಿದ್ದ ಗೋಕರ್ಣದಲ್ಲಿ ಬೆಳಿಗ್ಗೆ ಎರಡು ಗಂಟೆಯಿಂದ ಭಕ್ತರು ಆತ್ಮಲಿಂಗದ ದರ್ಶನ(Aatmalinga Darshan) ಪಡೆಯುತ್ತಿದ್ದಾರೆ.  ಸರತಿ ಸಾಲಿನಲ್ಲಿ ಆಗಮಿಸುತ್ತಿರುವ ಭಕ್ತರು ಆತ್ಮಲಿಂಗಕ್ಕೆ ನವದಾನ್ಯಗಳು, ಏಳನೀರು, ಕ್ಷೀರ, ಪಂಚಾಮೃತ ಅಭಿಷೇಕ ಮಾಡುತ್ತಿದ್ದಾರೆ.  ಮುಂಜಾನೆಯಿಂದ ಪೂಜೆ ಪುನಸ್ಕಾರಗಳು ಮುಂದುವರಿದಿದೆ. ಶಿವನಿಗೆ ಪ್ರಿಯವಾಗಿರುವ ಬಿಲ್ವಪತ್ರೆಗಳನ್ನ ಅರ್ಪಿಸಿ ಭಕ್ತರು ಪಾವನರಾಗುತ್ತಿದ್ದಾರೆ. 

ಮಹಾರಾಷ್ಟ್ರ(Maharashtra), ಗೋವಾ(Goa) ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಿಂದ ಆಗಮಿಸಿ ಆತ್ಮಲಿಂಗ ದರ್ಶನ ಪಡೆಯುತ್ತಿದ್ದಾರೆ. ಪಂಚಕ್ಷೇತ್ರಗಳಾದ ಮುರ್ಡೇಶ್ವರ, ಸಜ್ಕೇಶ್ವರ , ಧಾರೇಶ್ವರ(Dhareshwar), ಗುಣವಂತೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಕುಂಕುಮಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಸೇವಾಕೈಂಕರ್ಯಗಳು ನಡೆಯುತ್ತಿದೆ.

ಭಕ್ತರು  ಉಪವಾಸ, ಜಾಗರಣೆಯ ಮೂಲಕ ಶಿವನನ್ನ ಒಲಿಸಿಕೊಳ್ಳುವ ದಿನ ಶಿವರಾತ್ರಿ. ಹೀಗಾಗಿ ಶಿವನ ದೇವಾಲಯಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯದ ಭಕ್ತರು ಆಗಮಿಸಿದ್ದಾರೆ. ಮುರ್ಡೇಶ್ವರದಲ್ಲಿಯೂ ಸಹ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ಮೃಡೇಶ್ವರನ ದರ್ಶನ ಪಡೆಯುತ್ತಿದ್ದಾರೆ.  ಶಿವರಾತ್ರಿಯ ಮಹಾಪರ್ವದ(Shivaratri Mahaparva) ಸುದಿನವಾಗಿದ್ದರಿಂದ ಭಕ್ತರು ಇಷ್ಟಾರ್ಥ ಸಿದ್ದಿಗಾಗಿ ಮಹಾದೇವನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ದಾಂಡೇಲಿಯ ಕವಳೇಶ್ವರ(Dandeli Kavaleshwara), ಯಾಣದಲ್ಲಿಯೂ ಸಹ ಭಕ್ತರು ಚಾರಣದ ಜೊತೆಗೆ ಮಹಾದೇವನನ್ನ ಆರಾಧಿಸಿ, ಪೂಜಿಸುತ್ತಿದ್ದಾರೆ.

ಇದನ್ನು ಓದಿ : ಅಮದಳ್ಳಿ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ. ಸ್ಕೂಟಿ ಸವಾರ ಗಂಭೀರ.

ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆಯ ಬಗ್ಗೆ ಹವಮಾನ ಇಲಾಖೆ ಎಚ್ಚರಿಕೆ.

ಕುಮಟಾ ಪೊಲೀಸರ ಕಾರ್ಯಾಚರಣೆ. ಪೆಟ್ರೋಲ್ ಬಂಕ್ ಕಳ್ಳತನ ಪ್ರಕರಣದಲ್ಲಿ ಬಾಗಿಯಾದ ಇಬ್ಬರ ಬಂಧನ.