ಕಾರವಾರ(KARWAR) :  ಕಳೆದ 11 ದಿನಗಳ ಹಿಂದೆ ಪ್ರತಿಷ್ಠಾಪಿಸಿ ಪೂಜಿಸಿದ ಗಣಪನನ್ನ ಭಕ್ತರು ಇಂದು ಬೃಹತ್ ಮೆರವಣಿಗೆ ನಡೆಸುವ ಮೂಲಕ ಅರಬ್ಬಿ ಸಮುದ್ರದಲ್ಲಿ(OCEAN SEA) ಜಲಸ್ಥಂಭನಗೊಳಿಸಲಾಯಿತು. 

 ಗಡಿಭಾಗ ಕಾರವಾರದಲ್ಲಿ ಗಣೇಶೋತ್ಸವ ಅದ್ದೂರಿಯಿಂದ ನಡೆಯುತ್ತದೆ. ಪ್ರತಿವರ್ಷವೂ ನಗರದ ಮಾರುತಿ ಗಲ್ಲಿ(MARUTI GALLI), ಆಟೋ ಯುನಿಯನ್(AUTO UNION), ನಂದನಗದ್ದಾ(NANDANAGADDA), ಕೋಡಿಭಾಗ(KODIBAG),  ಕಾಜುಭಾಗ (KAJUBHAG),  ಶಿರವಾಡ(SHIRWAD), ಪೊಲೀಸ್ ಹೆಡ್ ಕ್ವಾರ್ಟರ್ಸ್(POLICE HEADQUARTERS), ಕೆ ಎಚ್ ಬಿ ಕಾಲೋನಿ(KHB COLONY) ಸೇರಿದಂತೆ ವಿವಿದೆಡೆಯಲ್ಲಿ 11 ದಿನಗಳ ಕಾಲ ಗಣೇಶನನ್ನ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷವೂ ಕೂಡ ತುಂಬಾ ವಿಜ್ರಂಭಣೆಯಿಂದ ಉತ್ಸವ ಆಚರಿಸಲಾಯಿತು. ಉತ್ಸವದ ಕೊನೆಯ ದಿನದಂದು  ಪ್ರತಿಷ್ಟಾಪಿಸಿದ ಗಣೇಶ ಮೂರ್ತಿಯನ್ನ(GANESH IDOL) ಅದ್ದೂರಿಯಿಂದ ಬೀಳ್ಕೊಡುವ ದೃಶ್ಯ ಮನೋಹರವಾಗಿತ್ತು. 

ಈ ಬಾರೀ ಡಿಜೆಯ ಅಬ್ಬರವಿಲ್ಲದೆ ಸಾಂಪ್ರದಾಯಿಕ ವಾದ್ಯಗಳ ಮೂಲಕ ಗಣೇಶನನ್ನ ಕರೆತರಲಾಯಿತು. ಮಹಿಳೆಯರ ವಾದ್ಯ, ಡೊಳ್ಳು ವಾದ್ಯ, ಚಂಡೆ ವಾದ್ಯಕ್ಕೆ ಭಕ್ತರು ಹೆಜ್ಜೆ ಹಾಕಿದರು. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರ(RABINDRANATH TAGORE BEACH), ಅಲಿಗದ್ದಾ ಕಡಲತೀರದಲ್ಲಿ ಜಲಸ್ತಂಭನಗೊಳಿಸಿದ್ರು. ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ನಗರದ ವಿವಿಧ ರಸ್ತೆಗಳಲ್ಲಿ ನಿಂತು ನಾಗರಿಕರು ಗಣೇಶನ ಬಿಳ್ಕೋಡುಗೆಯ ಕೊನೆಯ ಕ್ಷಣಗಳನ್ನ ಕಣ್ತುಂಬಿಕೊಂಡರು. 

ಇದನ್ನು ಓದಿ : ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಕ್ಕೆ ದೇವಾಲಯದಲ್ಲಿ ಪೂಜೆ

ಪತಿಯ ಸಂಬಂಧಿಯ ಪ್ರಾಣಕ್ಕೆ ಪ್ರಾಣ ಕೊಟ್ಟ ಮಹಿಳೆ

ಅಂಗನವಾಡಿಗೆ ಗಟ್ಟಿ ಬೆಲ್ಲ. ಗೃಹಲಕ್ಷ್ಮಿ ನಿರಂತರ