ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಪಟ್ಟಣದಹುರುಳಿಸಾಲದ ಮನೆಯೊಂದರ ಮೇಲೆ  ಅರಣ್ಯ ಇಲಾಖೆ(Forest Department) ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ 21 ಕೆಜಿ ಕಾಡುಕೋಣದ ಮಾಂಸ, ಜಿಂಕೆ ಕೊಂಬು  ಹಾಗೂ ಎರಡು ಏರ್‌ಗನ್‌ಗಳನ್ನು(Airgun) ವಶಪಡಿಸಿಕೊಂಡಿದ್ದಾರೆ. ಇದರ ರೂವಾರಿ ಸೈಯದ್ ಜಾಫರ್ ಬರ್ಮಾವರ್ ಎಂಬಾತ  ಪರಾರಿಯಾಗಿದ್ದಾನೆ.

ಜಾಪರ್ ಬರ್ಮಾವರ್  ಕಾಡಿನಲ್ಲಿ ಪ್ರಾಣಿಯನ್ನು ಹತ್ಯೆ ಮಾಡಿ, ಮಾಂಸವನ್ನು ಮನೆಯ ಪಕ್ಕದಲ್ಲೇ ಬೇರ್ಪಡಿಸಿ ಚರ್ಮ ಸೇರಿದಂತೆ ಉಳಿದ ಅವಶೇಷಗಳನ್ನು ಮನೆಯ ಪಕ್ಕದಲ್ಲಿ ಇದ್ದ ಪಾಳುಬಿದ್ದ ಬಾವಿಗೆ ಎಸೆದಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ದಾಳಿ ನಡೆಸಿದ್ದರು.

ದಾಳಿ ವೇಳೆ ಮನೆಯೊಳಗೆ ಶೋಧಕ್ಕೆ ಮುಂದಾದಾಗ ಆರಂಭದಲ್ಲಿ ಮನೆಯವರು  ಸಹಕರಿಸದೇ  ವಿರೋಧಿಸಿದ್ದರು ಎನ್ನಲಾಗಿದೆ.   ಸುಮಾರು ಆರು ಗಂಟೆಗಳ ಕಾಲ ಅಧಿಕಾರಿಗಳು ಕಾದ ಬಳಿಕ ಬಾಗಿಲು ತೆರೆದರು. ನಂತರ ನಡೆದ ಪರಿಶೀಲನೆಯಲ್ಲಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದ 21 ಕೆಜಿ ಮಾಂಸ ಪತ್ತೆಯಾಯಿತು. ಜೊತೆಗೆ ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದ್ಯ  ತಲೆಮರೆಸಿಕೊಂಡ ಜಾಫರ್ ಬರ್ಮಾವರ್ ಗಾಗಿ  ಅರಷ್ಯ ಮತ್ತು ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಕಾರ್ಯಾಚರಣೆಯಲ್ಲಿ ನಗರ ಠಾಣೆ ಸಿಪಿಐ ದಿವಾಕರ ಪಿ.ಎಂ. ಪಿಎಸ್ಐ ನವೀನ ನಾಯ್ಕ, ಗ್ರಾಮೀಣ ಠಾಣೆ ಪಿಎಸ್ಐ ಮಲ್ಲಿಕಾರ್ಜುನ, ಆರ್ಎಪ್ ಓ ವಿಶ್ವನಾಥ, ಡಿಆರ್‌ಒಎಫ್‌ಗಳಾದ ಮಾರುತಿ, ಸಂದೀಪ್ ಸೇರಿದಂತೆ ಧನಂಜಯ ಮೊಗೇರ ಮತ್ತಿತರರು ಭಾಗವಹಿಸಿದ್ದರು.

ಇದನ್ನು ಓದಿ : ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಹಲವರಿಗೆ ಗಂಭೀರ ಗಾಯ

ನಡು ರಸ್ತೆಯಲ್ಲಿ ಎದೆ ಝಲ್ಲೆನಿಸಿದ ಆನೆ. ಮೊಬೈಲ್ ನಲ್ಲಿ ದೃಶ್ಯ ಸೆರೆ.