ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಅಕ್ರಮವಾಗಿ ಜಾನುವಾರು ಮಾಂಸ ದಂದೆ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿದೆ. ಭಟ್ಕಳದ ಮುಗ್ಗುಂ ಕಾಲೋನಿಯ(Bhatkal Mugdoom colony) ನ್ಯಾಷನಲ್ ಸ್ಟ್ರೀಟ್(National Street) ನಿವಾಸಿಗಳಾದ ನಿಜಾಮುದ್ದೀನ ತಂದೆ ಮೊಹಮ್ಮದ ಇಸಾಕ್ ಮುಕ್ತಸರ (60), ಮೊಹಮ್ಮದ್ ತಸ್ವೀರ್ ತಂದೆ ಮೊಹಮ್ಮದ್ ಇಲಿಯಾಸ್ (40) ಮತ್ತು ಸಿದ್ದಿಕ್ ಸ್ಟ್ರೀಟ್ ನಿವಾಸಿ ಖಾಜಾ ಅಬುಲಾಸನ್ ತಂದೆ ಅಬು ಮೊಹಮ್ಮದ್ ಟೋನ್ಸೆ (55) ಬಂಧಿತರಾಗಿದ್ದಾರೆ.
ಆರೋಪಿತರು ಬುಧವಾರ ಸಂಜೆ ಐದುವರೆ ಸುಮಾರಿಗೆ ಭಟ್ಕಳ ಶಹರದ ಮುಗ್ಗುಂ ಕಾಲೋನಿಯ ನ್ಯಾಶನಲ್ ಸ್ಟ್ರೀಟ್ನಲ್ಲಿನ ನಿಜಾಮುದ್ದೀನ ಮುಕ್ತಸರ್ ಮನೆಯ ಪಕ್ಕದ ಕೋಣೆಯಲ್ಲಿ ಮಾಂಸ ಕಡಿಯುತ್ತಿದ್ದಾಗ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಇವರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನವಾರುವನ್ನು (Cattles) ಕಾನೂನು ಬಾಹಿರವಾಗಿ ಕಟಾವು ಮಾಡುತ್ತಿದ್ದರು.
ದಾಳಿ ಸಂದರ್ಭದಲ್ಲಿ ಸುಮಾರು 50 ಸಾ. ರೂಪಾಯಿ ಮಾಲ್ಯದ ನೂರು ಕೆ.ಜಿ ಯಷ್ಟು ಜಾನುವಾರು ಮಾಂಸ ಹಾಗೂ ಮಾಂಸ ಕಟಾವು ಮಾಡಲು ಉಪಯೋಗಿಸಿದ ಸಲಕರಣೆ ವಶಕ್ಕೆ ಪಡೆಯಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯ(Bhatkal Town Station) ಉಪನಿರೀಕ್ಷಕ ಸೋಮರಾಜ ರಾಥೋಡ ದೂರು (complaint) ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಯಲ್ಲಾಪುರದಲ್ಲಿ ಭೀಕರ ಅಪಘಾತ. ಹತ್ತು ಜನರ ದುರ್ಮರಣ.
ರೇನಾಲ್ಟ್ ಶೋ ರೂಮ್ ಗೆ ಬೆಂಕಿ. ಕೋಟ್ಯಂತರ ರೂ ಮೌಲ್ಯದ ಕಾರುಗಳು ಅಗ್ನಿಗಾಹುತಿ
ಹಸುವಿನ ಹತ್ಯೆ ಪ್ರಕರಣ. ಐವರು ವಶಕ್ಕೆ. ಕೃತ್ಯದಲ್ಲಿ ತೊಡಗಿದವರ ಗಡಿಪಾರಿಗೆ ಕ್ರಮ