ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿರಸಿ(Sirsi) : ನಾಳೆಯಿಂದ ಆರಂಭವಾಗಲಿರುವ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯ(Sirsi Marikamba jaatra) ಹಿನ್ನೆಲೆಯಲ್ಲಿ, ಜಾತ್ರಾ ಸೇವೆಗಾಗಿ ನಕಲಿ ವೆಬ್‌ಸೈಟ್(Fake Website) ನಿರ್ಮಿಸಿ ಭಕ್ತರನ್ನು ವಂಚಿಸಲು ಕೆಲ ದುಷ್ಕರ್ಮಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಜಾತ್ರಾ ಸೇವೆ ಬುಕ್ಕಿಂಗ್ ಹೆಸರಿನಲ್ಲಿ “ಯಜಮಾನ್”(Yajaman) ಎಂಬ ಐಡಿ ಸೃಷ್ಟಿಸಿ, ಆನ್‌ಲೈನ್ ಮೂಲಕ ₹3517 ಪಾವತಿಸಿದರೆ ಸೇವೆ ದೊರೆಯುತ್ತದೆ ಎಂಬ ತಪ್ಪು ಮಾಹಿತಿ ಹರಡಲಾಗಿದೆ. ಈ ಮೂಲಕ ಭಕ್ತರಿಂದ ಹಣ ದೋಚುವ ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.

ದೇವಸ್ಥಾನದ ಆಡಳಿತ ಮಂಡಳಿ ಈ ಕುರಿತು ಗಂಭೀರವಾಗಿ ಪರಿಗಣಿಸಿ, ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ(Sirsi Town Police Station) ದೂರು ದಾಖಲಿಸಿದೆ.

ಪೊಲೀಸ್ ಇಲಾಖೆಯಿಂದ ಎಚ್ಚರಿಕೆ :  ಫೇಕ್ ವೆಬ್‌ಸೈಟ್‌ಗಳ(Fake Website) ಬಗ್ಗೆ ಯಾರೂ ಗಮನ ಹರಿಸಬಾರದು, ಅಪರಿಚಿತ ಲಿಂಕ್‌ಗಳು(Unknown Link) ಅಥವಾ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಡುವ ಮಾಹಿತಿಯನ್ನು ನಂಬಬಾರದು ಎಂದು ಪೊಲೀಸ್ ಇಲಾಖೆ(Police Department) ಸಾರ್ವಜನಿಕರಿಗೆ ಸೂಚಿಸಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಮಾಹಿತಿ ನೀಡುತ್ತಾ,  “ನಕಲಿ ವೆಬ್‌ಸೈಟ್ ನಿರ್ಮಿಸಿದವರ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ. ಸೈಬರ್ ಕ್ರೈಂ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ. ಭಕ್ತರು ಅಧಿಕೃತ ವೆಬ್‌ಸೈಟ್ ಅಥವಾ ದೇವಸ್ಥಾನ ಕಚೇರಿಯ ಮಾಹಿತಿಯನ್ನು ಮಾತ್ರ ನಂಬಬೇಕು” ಎಂದು ಹೇಳಿದ್ದಾರೆ.

ಭಕ್ತರಿಗೆ ಮನವಿ:  ದೇವಸ್ಥಾನದ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಪರಿಶೀಲಿಸಿ.
ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಹಣ ಪಾವತಿಸುವ ಮೊದಲು ಮಾಹಿತಿ ಖಚಿತಪಡಿಸಿಕೊಳ್ಳಿ.
ವಂಚನೆ ಸಂಬಂಧಿತ ಮಾಹಿತಿ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಿ.
ಜಾತ್ರೆಯ ಸಂದರ್ಭದಲ್ಲಿನ ಈ ರೀತಿಯ ವಂಚನೆ ಪ್ರಯತ್ನಗಳು ಭಕ್ತರಲ್ಲಿ ಆತಂಕ ಮೂಡಿಸಿದ್ದು, ಅಧಿಕಾರಿಗಳು ಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ.

ಇದನ್ನು ಓದಿ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ. ಗುಡುಗು  ಸಹಿತ ಭಾರೀ ಮಳೆ

ಮನೆಗಳ ಮೇಲೆ ಕಲ್ಲು ತೂರಿದ ಹೀನ ಬುದ್ದಿಯವರು. ಠಾಣೆ ಮುಂದೆ ಹಿಂದು ಕಾರ್ಯಕರ್ತರ ಪ್ರತಿಭಟನೆ