ಕುಮಟಾ(KUMTA) : ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನ ಕುಮಟಾ ಪೊಲೀಸರು ರಕ್ಷಣೆ ಮಾಡಿದ ಘಟನೆ ಪಟ್ಟಣದ ಎಪಿಎಂಸಿ ಸಮೀಪ ನಡೆದಿದೆ. ಈ ಸಂದರ್ಭದಲ್ಲಿ ನಾಲ್ವರು ಆರೋಪಿತರನ್ನ bandಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು(MYSORE) ಮೂಲದ ಅಯೂಬ್ ಅಹಮದ್ ರಶೀದ್ (35), ಕೇರಳ ಕಾಸರಗೋಡಿನ(KERAL KASARGODU) ಅಬೂಬಕ್ಕರ್ ಮಹಮ್ಮದ್ (53), ಅಬ್ದುಲ್ ರೆಹಮಾನ್ ಪಲ್ಲಿಯನ್ (60) ಹಾಗೂ ಹಾಸನ(HASAN) ಜಿಲ್ಲೆ ಹೊಳೆನರಸೀಪುರದ ಅಜಗರ್ ಹುಸೈನ್ ಇಶ್ರತ್ ಹುಸೈನ್ (32) ಎಂಬುವವರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಿಂದ (MAHARASHTRA KOLLAPUR) ಕೇರಳದ ಪಾಲಕ್ಕಾಡ್ ಎಂಬಲ್ಲಿಗೆ ಎಮ್ಮೆಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಿಸಲಾಗುತಿತ್ತು. ಖಚಿತ ಮಾಹಿತಿ ಆಧರಿಸಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಎಮ್ಮೆಗಳನ್ನು ಇಕ್ಕಟ್ಟಾದ ಜಾಗದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡು ಬಂದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ (KUMTA POLICE STATION) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ