ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿರಸಿ(Sirsi) : ಎರಡು ವರ್ಷಕ್ಕೊಮ್ಮೆಬರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ(Sirsi sri Marikamba Jaatra) ಮಹೋತ್ಸವಕ್ಕೆ  ಶಿರಸಿ ಸಜ್ಜಾಗಿದೆ. ಎಲ್ಲೆಡೆ  ಸಂಭ್ರಮ ಮನೆಮಾಡಿದೆ.

ಬಿಡ್ಕಿಬೈಲಿನಲ್ಲಿ ಶ್ರೀ ದೇವಿ ಆಸೀನಳಾಗುವ  ಜಾತ್ರಾ ಗದ್ದುಗೆ  ಬಾರೀ  ಮಂಟಪದೊಂದಿಗೆೊಳಿಸುತ್ತಿದೆ. ಇಡೀ ಶಿರಸಿ ನಗರವೇ(Sirsi Town)  ಮದುವಣಗಿತ್ತಿಯಂತೆ ಶ್ರಂಗಾರಗೊಂಡಿದೆ.  ಜಾತ್ರೆಯನ್ನ ಕಣ್ಣುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಈಗಾಗಲೇ   ದೇವಸ್ಥಾನ ಆಡಳಿತ(Temple Committee) ಮಂಡಳಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.   ಅಂಗಡಿ ಮುಂಗಟ್ಟುಗಳು, ಅಮ್ಯೂಸಮೆಂಟ್ ಪಾರ್ಕ್ ಗಳು‌(Amusement Park) ತಮ್ಮ  ಮನೋರಂಜನಾ ಸಾಮಗ್ರಿಗಳ ಜೋಡಣೆ ಕಾರ್ಯವನ್ನ ಪೂರ್ಣಗೊಳಿಸಿವೆ.

ಇಂದಿನಿಂದ ಮಾರ್ಚ್ ಮೂರರವರೆಗೆ ಜಾತ್ರೆ ನಡೆಯಲಿದೆ. ಇಂದು  ಬೆಳಿಗ್ಗೆ ದೇವಿಯ ಭವ್ಯ ರಥೋತ್ಸವ(Rathotsava) ಜರುಗಲಿದೆ. ರಥದ ಮೇಲೆ ತಾಯಿ ಮಾರಿಕಾಂಬೆ ವಿರಾಜಮಾನಳಾಗಿ ಗದ್ದುಗೆಗೆ ಬರಲಿದ್ದಾಳೆ.

ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ(Police Department) ಮತ್ತು ಜಿಲ್ಲಾಡಳಿತ ಭದ್ರತೆಗೆ ಭಾರೀ ಸಿದ್ಧತೆ ಕೈಗೊಂಡಿವೆ ಎಂದು ಉತ್ತರ ಕನ್ನಡ ಎಸ್ಪಿ ದೀಪನ್ ತಿಳಿಸಿದ್ದಾರೆ.

🚗 25 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ
ಶಿರಸಿ ನಗರದ ವಿವಿಧ 25 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ(Parking System) ಮಾಡಲಾಗಿದೆ. ಆಯಾ ಭಾಗಗಳಿಗೆ ಬರುವ ಪ್ರಮುಖ ಮಾರ್ಗಗಳಲ್ಲೇ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ.
ಪಾರ್ಕಿಂಗ್ ಸ್ಥಳಗಳಲ್ಲಿ ಎಷ್ಟು ವಾಹನಗಳು ಈಗಾಗಲೇ ನಿಲುಗಡೆಯಾಗಿವೆ ಎಂಬ ಮಾಹಿತಿಯನ್ನು ವಾಹನ ಸವಾರರು ತಕ್ಷಣ ತಿಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
www.sirsipolice.com ವೆಬ್‌ಸೈಟ್ ಮೂಲಕ ಪಾರ್ಕಿಂಗ್ ಮಾಹಿತಿ ಮತ್ತು ರೂಟ್ ಮ್ಯಾಪ್‌ಗಳನ್ನು ಪರಿಶೀಲಿಸಬಹುದು.

ಭದ್ರತೆಗೆ ವಿಶೇಷ ಕ್ರಮಗಳು :
ಜಾತ್ರಾ ಸಂದರ್ಭದಲ್ಲಿ ಸರಗಳ್ಳತನ ಮತ್ತು ಇತರ ಅಪರಾಧಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಸ್ಪೆಷಲ್ ಕ್ರೈಂ ಸ್ಕ್ವಾಡ್ ರಚಿಸಲಾಗಿದೆ. ಶಿರಸಿ ನಗರದ ವಿವಿಧ ಭಾಗಗಳಲ್ಲಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಫೇಸ್ ರೀಡಿಂಗ್ ವ್ಯವಸ್ಥೆ ಬಳಕೆ ಮಾಡಲಾಗುತ್ತದೆ.  ಭಕ್ತರಿಗೆ ತಕ್ಷಣದ ನೆರವು ನೀಡಲು ಜಾತ್ರಾ ವ್ಯಾಪ್ತಿಯಲ್ಲಿ ಐದು ವಿಶೇಷ ಸಹಾಯ ಕೇಂದ್ರಗಳು ಆರಂಭಿಸಲಾಗಿದೆ.

750 ಪೊಲೀಸ್ ಸಿಬ್ಬಂದಿಗಳು, 200 ಹೋಮ್ ಗಾರ್ಡ್‌ಗಳು, 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು,  4 ಕೆಎಸ್ಆರ್ಪಿ (KSRP) ತುಕಡಿಗಳನ್ನ ನಿಯೋಜಿಸಲಾಗಿದೆ.  ಜಾತ್ರೆಯನ್ನು ಶಾಂತಿಯುತವಾಗಿ ಹಾಗೂ ಭದ್ರತೆಯೊಂದಿಗೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಎಸ್ಪಿ ದೀಪನ್ ತಿಳಿಸಿದ್ದಾರೆ.

ಭಕ್ತರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ, ಸಂಯಮದಿಂದ ಜಾತ್ರೆಯಲ್ಲಿ ಭಾಗವಹಿಸುವಂತೆ ಅವರು  ಮನವಿ ಮಾಡಿದ್ದಾರೆ.

ಇದನ್ನು ಓದಿ : ಶಿರಸಿ ಮಾರಿಕಾಂಬಾ ಜಾತ್ರೆ. ಸೇವೆಗೆ ನಕಲಿ ವೆಬ್ ಸೈಟ್ : ಭಕ್ತರಿಗೆ ಎಚ್ಚರಿಕೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ. ಗುಡುಗು  ಸಹಿತ ಭಾರೀ ಮಳೆ