ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಇಂದು ನಾವು ಗಟ್ಟಿಯಾಗಿ ಇದ್ರೆ ಮಾತ್ರ ನಮ್ಮ ಉಸಿರು ಇರುತ್ತೆ. ನಾವು ಗಟ್ಟಿಯಾಗಿದ್ರೆ ನಾವು ಇಲ್ಲಿ ಇರಲು ಸಾಧ್ಯ. ಭಟ್ಕಳದ ಜನರಿಗೆ ಇದರ ಬಗ್ಗೆ ಹೇಳೋದೆ ಬೇಕಾಗಿಲ್ಲ. ನಾವು ಒಂದಾಗಿ ನಿಲ್ಲದಿದ್ರೆ ಗೋವಿಂದಾನೆ ಗೋವಿಂದ. ಹೀಗಾಗಿ ಎಚ್ಚೆತ್ತುಕೊಳ್ಳಿ ಹಿಂದೂಗಳೇ ಒಂದಾಗಿ ಎದ್ದು ನಿಲ್ಲಿ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಕರೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಆಟೋ ರಿಕ್ಷಾ ಮೈದಾನದಲ್ಲಿ ರವಿವಾರ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡುತ್ತಿದ್ದರು. ದೇಶದಲ್ಲಿ ಜಾತ್ಯಾತೀತತೆ ಅಂದ್ರೆ ಹಿಂದೂತ್ವವಾಗಿದೆ. ಅದಕ್ಕಿಂತ ಜಾತ್ಯಾತೀತತೆ ಬೇರೆ ಬೇಕಾಗಿಲ್ಲ. ಬೇರೆ ರಾಷ್ಟ್ರದವರು ಇಲ್ಲಿಗೆ ಬಂದು ಮಸೀದಿ ಚರ್ಚ್ ಕಟ್ಟಿ ಬದುಕುತ್ತಿದ್ದಾರೆ. ಎಲ್ಲ ಸಮಾಜದವರು ಭಾರತದಲ್ಲಿ ನೆಮ್ಮದಿಯ ಜೀವನ ಮಾಡುತ್ತಿದ್ದಾರೆಂದ ಅವರು, ಇಷ್ಟೆಲ್ಲ ಇವರಿಗೆ ಆಸ್ಪದ ಕೊಟ್ವಿ ಅಂದ್ರೆ ನಾವು ಜಾತ್ಯಾತೀತರು ಅಲ್ವಾ ಎಂದು ಪ್ರಶ್ನಿಸಿದ ಅನಂತಕುಮಾರ ಇದಕ್ಕಿಂತ ಜಾತ್ಯಾತೀತತೆ ಉದಾಹರಣೆ ನಮಗೆ ಬೇಕಾ ಎಂದರು.
ಇಂದು ಬಾಂಗ್ಲಾದೇಶ ಸೇರಿದಂತೆ ಬೇರೆ ರಾಷ್ಟ್ರಗಳಿಗೆ ಹೋಗಿ ಹೇಳಲಿ. ನಾವು ಜಾತ್ಯಾತೀತರು ಅಂತ ಅಲ್ಲಿಗೆ ಹೋಗಿ ಹೇಳಲಿ. ಬಾಂಗ್ಲಾ ಸೇರಿದಂತೆ ಬೇರೆ ದೇಶಗಳಲ್ಲಿನ ಹಿಂದೂಗಳ ಪರಿಸ್ಥಿತಿ ಏನಾಗಿದೆ ತಿಳಿದುಕೊಳ್ಳಿ. ಹಿಂದೂಗಳಿಗೆ ಅಷ್ಟೊಂದು ತೊಂದ್ರೆ ಕೊಡುವ ರಾಷ್ಟ್ರಗಳ ಮುಂದೆ. ನಮ್ಮ ಹಿಂದೂಗಳ ಸಹಕಾರದಿಂದ ಭಾರತ ನೆಮ್ಮದಿಯಿಂದ ಇದೆ ಅಂದ್ರೆ. ಜಾತ್ಯಾತೀತತೆಗೆ ಮತ್ತೊಂದು ಹೆಸರು ಹಿಂದು.
ಹಿಂದೂಗಳನ್ನ ಮುಸ್ಲಿಂರು, ಕ್ರಿಶ್ಚಿಯನ್ ರು ಎನೂ ಮಾಡಿಲ್ಲ. ಜಯಚಂದನೆ ನಮ್ಮ ಹಿಂದೂಗಳನ್ನ ಸೋಲಿಸಿದ. ಮಲ್ಲಪ್ಪ ಶೆಟ್ಟಿಯೇ ರಾಣಿ ಚೆನ್ನಮ್ಮಳನ್ನ ಸೋಲಿಸಿದ್ದ. ಹಿಂದೂಗಳನ್ನ ಸೋಲಿಸಿದ್ದ ಬೇರೆ ಯಾರು ಅಲ್ಲ. ಹಿಂದೂಗಳನ್ನ ಸೋಲಿಸಿದ್ದ ನಮ್ಮ ಹಿಂದೂಗಳಾಗಿದ್ದಾರೆ. ಮುಸ್ಲಿಂರು ಕ್ರಿಶ್ಚಿಯನ್ ರು ನಮಗೆ ಏನು ಮಾಡಲಿಲ್ಲ ಎಂದು ಅವರು ಹೇಳಿದರು.
ಹಿಂದೂ ಸಂಘಟನೆ ಒಂದು ಶಕ್ತಿ ಅಂತಾ ಯಾರಿಗೂ ಅನಿಸಿರಲಿಲ್ಲ. ಆದ್ರೆ ಒಂದು ಶತಮಾನಗಳ ಹಿಂದಿನ ಒಂದು ಕಿಡಿ ಇಂದು ಇಷ್ಟೊಂದು ದೊಡ್ಡ ಸಂಘಟನೆಯಾಗಿದೆ. ಕೊಟ್ಯಾಂತರ ಜನ ಹಿಂದೂ ಸಮಾವೇಶದಲ್ಲಿ ಭಾಗಿ ಆಗುತ್ತಿದ್ದಾರೆ. ಕಾರಣ ಒಂದೇ “ನಾವು ಹಿಂದೂ ನಾವೆಲ್ಲ ಒಂದು” ಎಂಬ ಸಂದೇಶ ಸಾರಲು. ಇಂದು ಮಾಧ್ಯಮಗಳಲ್ಲಿ ನೋಡಿದಾಗ ನಮಗೆಲ್ಲ ಹೆಮ್ಮೆ ಅನಿಸುತ್ತೆ. ಅದಕ್ಕೆ ಕಾರಣ ನಮ್ಮಲ್ಲಿನ ಹಿಂದೂ ಜಾಗೃತಿ ಆಗಿದೆ. ಜಾತಿ, ಭಾಷೆ ಮತಗಳ ಅಪಸ್ವರ ಕೇಳುತ್ತಿರುತ್ತದೆ. ಅದರ ಮಧ್ಯೆಯೂ ನಾವೇಲ್ಲ ಹಿಂದೂ ಎಂಬ ಸಂದೇಶ ಕೊಡುತ್ತಿದ್ದೇವೆ ಎಂದು ಅನಂತಕುಮಾರ ಹೇಳಿದರು.
ಇಂದು ಇಡಿ ಜಗತ್ತು ನಮ್ಮ ಭಾರತದ ಕಡೆ ನೋಡುತ್ತಿದೆ. ಅದಕ್ಕೆ ಕಾರಣ ನಮ್ಮಲ್ಲಿನ ಹಿಂದೂತ್ವ ಇಂದು ಜಾಗೃತಿ ಆಗಿದೆ. ಇವತ್ತಿನ ಭಾರತದ ಅಭಿವೃದ್ದಿ ಜಗತ್ತಿಗೆ ನೋಡಲಾಗುತ್ತಿಲ್ಲ. ಕ್ಷಣ ಕ್ಷಣಕ್ಕೂ ನಮ್ಮನ್ನ ಹಿಂದಿಕ್ಕಲೂ ಜಗತ್ತಿನ ಬೇರೆ ದೇಶಗಳು ಪ್ರಯತ್ನಿಸುತ್ತಿವೆ. ಜಗತ್ತಿನಲ್ಲಿ ಬಹಳಷ್ಟು ದೇಶಗಳಲ್ಲಿ ಹಿಂದೂತ್ವಕ್ಕೆ ಬೆಲೆ ಇದೆ. ಹಿಂದೂತ್ವದ ಆಚರಣೆಗಳಿಗೆ ಹೆಚ್ಚು ಬೆಲೆ ಕೊಡುತ್ತಿದೆ. ಜಗತ್ತು ಬೆಲೆ ಕೊಡುತ್ತಿರುವುದಕ್ಕೆ ತಕ್ಕಂತೆ.. ನಾವು ಇಂದು ಎದ್ದು ನಿಲ್ಲ ಬೇಕಿದೆ. ಆಫ್ರಿಕಾದಲ್ಲಿ ನಮಗಿಂತ ಸುಂದರವಾಗಿ ಗಣೇಶ್ ಹಬ್ಬ ಆಚರಿಸ್ತಾರೆ. ರಷ್ಯಾದಲ್ಲಿಯೂ ವರ್ಷಪೂರ್ತಿ ಕೃಷ್ಣನ ರಥೋತ್ಸವ ನಡೆಸ್ತಾರೆ ಅಂದ್ರೆ ಹಿಂದು ಧರ್ಮಕ್ಕೆ ಅಷ್ಟೊಂದು ಶಕ್ತಿ ಇದೆ ಎಂದರು.
ಬಂಟ್ವಾಳ ಮಣೀಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಹಿಂದು ಸಂಗಮ ಕಾರ್ಯಕ್ರಮಕ್ಕೂ ಮುನ್ನ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಬೃಹತ್ ಶೋಭಾ ಯಾತ್ರೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಹಿಂದು ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ : ಮುರ್ಡೇಶ್ವರ ಮೂಲದ ಶ್ರೇಯನ್ಸ್ ಯುಪಿಎಸ್‌ಸಿ ಯಲ್ಲಿ 169 ನೇ ರ್ಯಾಂಕ್.
ಶಾಲೆಯಲ್ಲಿ ಮಲಗಿ ಶಿಕ್ಷಕಿಯ ದುರ್ನಡತೆ. ಮಕ್ಕಳಿಂದ ಬೆನ್ನು ತುಳಿಸಿಕೊಂಡು ಇರಿಸುಮುರಿಸು.
