ಕಾರವಾರ(KARWAR) : ನವರಾತ್ರಿ ಹಬ್ಬದಲ್ಲಿ ಆಯುಧ ಪೂಜೆಗೆ (AYUDHA POOJA) ವಿಶೇಷ ಮಹತ್ವವಿದೆ. ಎಲ್ಲಡೆ ಈ ದಿನದಂದು  ರಕ್ಷಣಾತ್ಮಕ ವಸ್ತುಗಳು, ಉಪಕರಣಗಳು, ಕೆಲಸಕ್ಕೆ ಬಳಸುವ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ(DAR) ವತಿಯಿಂದ ವಾಹನಗಳಿಗೆ ಅಧಿಕಾರಿಗಳು ಸಶಾಸ್ತ್ರಗಳಿಗೆ ಪೂಜೆ ಸಲ್ಲಿಸಿದರು.   ಇಲಾಖೆಗೆ ಆಗಮಿಸಿದ ಹೊಸ ವಾಹನಗಳಿಗೆ ಪೂಜಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್, ಡಿವೈಎಸ್ಪಿ ಗಿರೀಶ್ ಸೇರಿದಂತೆ ಅಧಿಕಾರಿಗಳು ದುರ್ಗಾ ಪೂಜೆ(DURGA POOJA) ನೆರವೇರಿಸಿದರು.

ಇಲಾಖೆಯ ಎಲ್ಲಾ ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು. ಸಂಪ್ರದಾಯದಂತೆ ಈ ಬಾರೀ ಅಧಿಕಾರಿಗಳು ಬಾಳೆ ಗಿಡ ಕಡಿದಿರುವುದು ವಿಶೇಷವಾಗಿತ್ತು. ಡಿಎಆರ್ ವಾಹನಗಳ ಚಾಲಕರು, ಸಿಬ್ಬಂದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ದುರ್ಗಾ ಮಾತೆಯು ಮಹಿಷಾಸುರನ ವಧೆಗೆ ಹೋಗುವ ಮುನ್ನ ದೇವಾನುದೇವತೆಗಳೆಲ್ಲ ತಮ್ಮ ಆಯುಧಗಳನ್ನ ದುರ್ಗೆಗೆ ನೀಡಿದ್ದರಂತೆ. ದೇವಿಯ ಯುದ್ಧಕ್ಕೂ ಮುನ್ನ ಈ ಎಲ್ಲ ಆಯುಧಗಳಿಗೂ ದೇವತೆಗಳೇ ಪೂಜೆ ಸಲ್ಲಿಸಿದ್ದಾರೆ. ಹಾಗಾಗಿಯೇ ಪ್ರತಿವರ್ಷ ದಶಮಿಯ ಮುನ್ನಾದಿನ, ಅಂದರೆ ನವಮಿಯ ದಿನ ಆಯುಧ ಪೂಜೆ ಮಾಡಲಾಗುತ್ತದೆ. ಉತ್ತರಕನ್ನಡ ಜಿಲ್ಲೆಯ ವಿವಿಧಡೆ ಆಯುಧ ಪೂಜೆ ಸಂಭ್ರಮದಿಂದ ನೆರವೇರಿತು.

ಇದನ್ನು ಓದಿ : ಕುಣಿಕೆ ಹಾಕಿ ಜಾನುವಾರು ಕದಿಯುವ ಖದೀಮರು

ಬಾಗಾ ಬೀಚಲ್ಲಿ ಪ್ರವಾಸಿ ಬೋಟ್ ಪಲ್ಟಿ

ಆನ್ ಲೈನ್ ವಂಚನೆ.ಹಣ ಕೊಡಿಸಲು ಪೊಲೀಸರಿಂದ ಯಶಸ್ವಿ ಪ್ರಯತ್ನ.

ನಾರ್ತ್ ಕರ್ನಾಟಕ ಅಚೀವರ್ಸ್ ಅವಾರ್ಡ್ ಪಡೆದ ಚೈತ್ರಾ

ರತನ್ ಟಾಟಾ ನಿಧನಕ್ಕೆ ಪ್ರೇಯಸಿ ಬಾವುಕ ವಿದಾಯ