ಭಟ್ಕಳ( BHATKAL) : ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಜಯ ದಶಮಿಯನ್ನ (VIJAYADASHAMI)ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಶ್ರದ್ದಾ ಕೇಂದ್ರ, ಭಕ್ತರ ನಂಬಿಕೆಯ ಶಕ್ತಿ ಸ್ಥಳ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ(ALVEKODI SRI DURGAPARAMESHWARI TEMPLE) ಮತ್ತು ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ(MUNDALLI SRI DURGAPARAMESHWARI TEMPLE) ವಿಜೃಂಭಣೆಯಿಂದ ಶರನ್ನವರಾತ್ರಿಯನ್ನ ಆಚರಿಸಲಾಯಿತು.

ಪ್ರತಿ ದಿನವೂ ಕೂಡ ದೇವಿಗೆ ವಿಭಿನ್ನ ಅಲಂಕಾರದಿಂದ ಮಾಡಿದ್ದರಿಂದ ಭಕ್ತರನ್ನ ಕಂಗೊಳಿಸಿತು. ವಿಶೇಷವಾಗಿ ಭಕ್ತರು ನವರಾತ್ರಿ ಸಂದರ್ಭದಲ್ಲಿ ವೃತ ಮಾಡುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ದೇವಿಯ ಸನ್ನಿಧಿಯಲ್ಲಿ ಹೋಮ ಹವನಾದಿಗಳು ನಡೆದವು. ಶನಿವಾರ ವಿಜಯದಶಮಿ ದಿನವಾಗಿದ್ದರಿಂದ ಅಳ್ವೆಕೋಡಿ ದೇವಾಲಯದಲ್ಲಿ ಚಂಡಿಕಾ ಹೋಮ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.

ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು. ಹತ್ತು ದಿನಗಳ ಕಾಲ ಮಧ್ಯಾಹ್ನ ಭಕ್ತರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು. ಅಳ್ವೆಕೋಡಿಯಲ್ಲಿ 15 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯುವುದು ವಿಶೇಷವಾಗಿದೆ.

ಇದನ್ನು ಓದಿ : ಲೈಫ್ ಗಾರ್ಡ್ ಸಿಬ್ಬಂದಿಗಳಿಂದ ಇಬ್ಬರ ರಕ್ಷಣೆ. ಒಬ್ಬ ಪರಾರಿ

ಕೇಂದ್ರ ಸರ್ಕಾರದಿಂದ ಉತ್ತರಕನ್ನಡ, ಉಡುಪಿಗೆ ಗಿಫ್ಟ್

ವಾಯುಭಾರ ಕುಸಿತ. ಅಕ್ಟೋಬರ್ 16ರವರೆಗೆ ಮಳೆ

ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು. 9ಜನರ ಬಂಧನ

ಆರೋಪಿಗಳ ಮೇಲೆ ಪೊಲೀಸರ ಪೈರಿಂಗ್