ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ರಾಷ್ಟ್ರೀಯ ಹೆದ್ದಾರಿ 66(NH 66) ತಾಲೂಕಿನ ಸಂಕ್ರುಭಾಗ(Sankrubhag) ಸಮೀಪ  ಕಂಟೇನರ್‌ವೊಂದು(Container) ಎದುರಿನಿಂದ ಬರುತ್ತಿದ್ದ ಕಾರಿಗೆ(Car) ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ.

ಅಪಘಾತದಲ್ಲಿ  ಕಾರಿನಲ್ಲಿದ್ದ ಎಂಟು‌ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೂವರು ಗಂಭೀರ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ(Maharashtra) ಕೃಷಿ ನಗರದ ಸಂಗಮಚೌಕ್ ನಿವಾಸಿಯಾದ ವಿಯಾನ ಪ್ರಕಾಶ ವಾಘ್ (8) ಮೃತಪಟ್ಟ ದುರ್ದೈವಿ. ಬಾಲಕನ ತಂದೆ ಪ್ರಕಾಶ ವಾಘ್ (48), ತಾಯಿ ಅಮೃತ ವಾಘ (38), ಅಕ್ಕ ಭೂಮಿಕಾ (16) ಗಂಭೀರ ಗಾಯಗೊಂಡಿದ್ದಾರೆ.

ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಗೋಕರ್ಣದಿಂದ ಮಹಾರಾಷ್ಟ್ರಕ್ಕೆ(Gokarn to Maharashtra) ತೆರಳುತಿತ್ತು. ಗೋವಾದಿಂದ ಕೊಚ್ಚಿನ್ ಗೆ(Goa to Kochhin) ತೆರಳುತ್ತಿದ್ದ ಕಂಟೇನರ್ ವಾಹನ ಚಾಲಕನ ನಿಯಂತ್ರಣ ತಪ್ಪಿ‌ ಕಾರಿಗೆ ಗುದ್ದಿ ಬಳಿಕ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಕಾರು ತಿರುಗಿ ನಿಂತಿದ್ದು, ಕಂಟೇನರ್ ವಾಹನ  ರಸ್ತೆ ಅಂಚಿನ ಗುಡ್ಡಕ್ಕೆ ಗುದ್ದಿ ಕಾರಿನ ಮೇಲೆ ಒರಗಿ ಬಿದ್ದ ಪರಿಣಾಮ  ಜಖಂಗೊಂಡಿದೆ(Crashed). ಕಾರಿನ ಹಿಂಭಾಗದಲ್ಲಿದ್ದ ಬಾಲಕ ವಿಯಾನ ವಾಘ್ ಅಲ್ಲೇ ಮೃತಪಟ್ಟಿದ್ದಾನೆ.

ಗಾಯಗೊಂಡವರನ್ನು ಸ್ಥಳೀಯರು, ಪೊಲೀಸರು ಸೇರಿ ತಕ್ಷಣ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Karwar Rural Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಗೇರುಸೊಪ್ಪ ಬಳಿ ಖಾಸಗಿ ಬಸ್ ಪಲ್ಟಿ. ಹಲವು ಪ್ರಯಾಣಿಕರಿಗೆ ಗಾಯ.

ಹಿಂದುಗಳೇ ಎಚ್ಚೆತ್ತುಕೊಳ್ಳಿ. ಒಂದಾಗಿ ಎದ್ದು ನಿಲ್ಲಿ : ಅನಂತಕುಮಾರ ಹೆಗಡೆ ಕರೆ.

ಮುರ್ಡೇಶ್ವರ ಮೂಲದ ಶ್ರೇಯನ್ಸ್ ಯುಪಿಎಸ್‌ಸಿ ಯಲ್ಲಿ‌ 169 ನೇ ರ್ಯಾಂಕ್.