ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಶಿರಸಿಯ(Sirsi) 110 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ನಡೆಯುತ್ತಿರುವುದರಿಂದ, ಕುಮಟಾ(Kumta), ಹೊನ್ನಾವರ(Honnavar) ಹಾಗೂ ಭಟ್ಕಳ(Bhatkal) ತಾಲೂಕಿನ ಶೇ. 70ರಷ್ಟು ಗ್ರಾಮೀಣ ಭಾಗಗಳಲ್ಲಿ ಇಂದು ಮಾರ್ಚ್ 16ರಂದು ವಿದ್ಯುತ್ ಪೂರೈಕೆಯಲ್ಲಿ(Power Supply) ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿರಸಿಯ 110 ಕೆವಿ ಉಪಕೇಂದ್ರದಲ್ಲಿ ಹೊಸ CT (Current Transformer) ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಾಗಿ 110 ಕೆವಿ ‘ಎಸಳೆ – ಶಿರಸಿ ಮಾರ್ಗ 2’ ರಲ್ಲಿ ಮಾರ್ಗ ಮುಕ್ತತೆ ಪಡೆಯಲಾಗುತ್ತಿದೆ. ಇದರಿಂದ ‘ಎಸಳೆ – ಶಿರಸಿ ಮಾರ್ಗ 1’ ರ ಮೇಲೆ ಉಂಟಾಗುವ ಒತ್ತಡವನ್ನು ತಪ್ಪಿಸುವ ಉದ್ದೇಶದಿಂದ ವಿದ್ಯುತ್ ಕಡಿತ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 1:30 ರ ನಂತರ ಸುಮಾರು 2 ತಾಸುಗಳ ಕಾಲ ಕುಮಟಾ(Kumta), ಹೊನ್ನಾವರ(Honnavar) ಹಾಗೂ ಭಟ್ಕಳ(Bhatkal) ತಾಲೂಕಿನ 70% ಗ್ರಾಮೀಣ ಫೀಡರ್ ವ್ಯಾಪ್ತಿಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಹೀಗಾಗಿ ಸಾರ್ವಜನಿಕರು, ಗ್ರಾಹಕರು ಹಾಗೂ ರೈತರು ಈ ಅನಿವಾರ್ಯ ವಿದ್ಯುತ್ ವ್ಯತ್ಯಯಕ್ಕೆ ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಅಧಿಕಾರಿಗಳು ಕೋರಿದ್ದಾರೆ.
ಇದನ್ನು ಓದಿ : ಕೆಎಸ್‌ಆರ್‌ಟಿಸಿ ಬಸ್–ಓಮ್ನಿ ನಡುವೆ ಭೀಕರ ಅಪಘಾತ ಡಿಕ್ಕಿ. ಚಾಲಕ ಸ್ಥಳದಲ್ಲೇ ಸಾವು.
ಕಾರವಾರದಲ್ಲಿ ಸತ್ಯಸಾಯಿಸೇವಾ ಸಂಸ್ಥೆ ಆಯೋಜಿಸಿದ ಏಕತಾ ಓಟ ಮತ್ತು ಸೈಕಲ್ ಸವಾರಿಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ.
ಭೀಕರ ಅಪಘಾತ — ಮೂವರು ಸಬ್ ಇನ್ಸಪೆಕ್ಟರ್ ಗಳು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ
