ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾಣಕೋಣ(Kanakon) : ಕಾರವಾರದಲ್ಲಿ ಮೆಡಿಕಲ್(Karwar Medical) ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸರಣಿ ಸಾವು ಘಟಿಸುತ್ತಲೆ ಇದೆ. ಕಳೆದ ರಾತ್ರಿ ಗೋವಾದ ಪೋಳೆಂ(Goa Polem) ಸಮೀಪ ಮತ್ತೋರ್ವ ವಿದ್ಯಾರ್ಥಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಕಾರವಾರ ವೈದ್ಯಕೀಯ ಕಾಲೇಜಿನ(Karwar Medical College) ಪ್ರಿತಮ್ (22) ಮೃತ ವಿದ್ಯಾರ್ಥಿ, ಇನ್ನೋರ್ವ ವಿದ್ಯಾರ್ಥಿ ಬಸವರಾಜ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸೋಮವಾರ ರಾತ್ರಿ ಪ್ರೀತಮ್ ಹಾಗೂ ಬಸವರಾಜ್ ಊಟಕ್ಕೆಂದು ಗೋವಾ(Goa) ಕಡೆ ತೆರಳಿದ್ದರು ಎನ್ನಲಾಗಿದೆ. ತಡರಾತ್ರಿ ಊಟ ಮುಗಿಸಿ ವಾಪಸ್ ಕಾರವಾರಕ್ಕೆ ಬರುತ್ತಿದ್ದಾಗ ಪೋಳೆಂನ ಕ್ಲೌಡ್ ನೈನ್ ಹೋಟೆಲ್(Cloud Nine Hotel) ಸಮೀಪ ಬೈಕ್‌ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಚಿತ್ರದುರ್ಗ ಮೂಲದ ಪ್ರೀತಮ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ(Karwar Krims Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಗೋವಾದ ಕಾಣಕೋಣ ಪೊಲೀಸರು(Goa Kanakon Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕಳೆದ ಕೆಲ ತಿಂಗಳಿಂದ ಗೋವಾಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಕೆಲ‌ ವಿದ್ಯಾರ್ಥಿಗಳು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಕಾರವಾರದ ಆರ್ಟಿಓ ಕಚೇರಿ(Karwar RTO) ಮುಂದೆ ಸಹ ಅಪಘಾತದಲ್ಲಿ ಸಾವುನೋವು ಉಂಟಾಗಿತ್ತು. ದೂರದೂರದಿಂದ ಕಾರವಾರಕ್ಕೆ ಓದಲು ಬಂದ ವಿದ್ಯಾರ್ಥಿಗಳ ಅಕಾಲಿಕ ಸಾವು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಇದನ್ನು ಓದಿ : ಇಲೆಕ್ಟ್ರಿಕ್ ವಸ್ತುಗಳನ್ನು ‌ಕದ್ದ ಕಳ್ಳರಿಗೆ ಪೊಲೀಸರ ಶಾಕ್.

ಮಿಸ್ ಕಾರವಾರ’ ಆಗಿ ಕಾಂಚನಾ ಗೌಡ. ಕೋಲ್ಕತ್ತಾ ಮೂಲದ ಸುತಪಾ ರನ್ನರ್ ಅಪ್.

ಭಟ್ಕಳದಲ್ಲಿ ಕೂಲಿ ಕಾರ್ಮಿಕ ಸಂಶಯಾಸ್ಪದ ಸಾವು. ಪೊಲೀಸರಿಂದ ತನಿಖೆ.