ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿರಸಿ(Sirsi) : ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈದ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸರು(Sirsi New Market Station) ಇಬ್ಬರನ್ನು ಬಂಧಿಸಿದ್ದಾರೆ.

ಕಸ್ತೂರ್ಬಾ ನಗರದ ಅಬ್ದುಲ್ ಗನಿ (25) ಹಾಗೂ‌ ಬಚಗಾಂವನ ಕೃಷ್ಣ ಆಚಾರಿ (19) ವರ್ಷ  ಬಂಧಿತ ಆರೋಪಿಯಾಗಿದ್ದಾರೆ.  ಶಿರಸಿ ನಗರದ ಸ್ಟೇಡಿಯಂ(Stadium) ಹತ್ತಿರ ಸಿಕ್ಕವರಿಗೆ ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆಯಲಾಗಿತ್ತು. ನಗರದ ಪಂಡಿತ ಸಾರ್ವಜನಿ‌ಕ ಆಸ್ಪತ್ರೆ(Pandit Government Hospital) ಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ(Sirsi New Market Police Station)  NDPS ಕಾಯಿದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ್ ಕನಶೆಟ್ಟಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ , ಸಂದೀಪ್. ರಾಕೇಶ್  ಸಂತೋಷ್, ಅರುಣ್, ಮಂಜುನಾಥ್, ಹನುಮಂತ್ ವಾಲಿಕಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ : ಭೀಕರ ಆ್ಯಸಿಡ್ ದಾಳಿ: ಐವರಿಗೆ ಗಾಯ. ಆಟೋ ಚಾಲಕನಿಂದ ಕೃತ್ಯ.

ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿರ್ದೇಶಕ‌ ಸ್ಥಾನಕ್ಕೆ ವಿಠ್ಠಲ ದೈಮನೆ ನಾಮಪತ್ರ ಸಲ್ಲಿಕೆ.

ಮುರ್ಡೇಶ್ವರ ಸಮೀಪ ಬೈಕ್ ಗೆ ಟಿಪ್ಪರ್ ‌ಢಿಕ್ಕಿ. ಸವಾರ ದುರ್ಮರಣ.