ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ವಿಶ್ವ ಪರಂಪರೆಯ (World Heritage) ಸಮಾವೇಶದ ಮಾರ್ಗ ಸೂಚಿಗಳ ನಿಬಂಧನೆಗಳಿಗೆ ಅನುಸಾರವಾಗಿ ಕ್ರಮ ಜರುಗಿಸಬೇಕೆಂದು ಹಾಗೂ ಸಮಾವೇಶದ ನಿಬಂಧನೆಗಳನ್ನ ಪಾಲಿಸಬೇಕೆಂದು ಭಾರತ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಯುನೆಸ್ಕೋ(UNESCO) ಲಿಖಿತವಾಗಿ ಉತ್ತರಿಸಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ(Uttarakannada District Siddapura) ಕೇಂದ್ರ ನೀರಾವರಿ ಅಭಿವೃದ್ದಿ ಪ್ರಾಧಿಕಾರವು, ಅಘನಾಶಿನಿ ವೇದಾವತಿ(Aghanashini Vedavati) ನದಿ ಜೋಡಣೆ ಯೋಜನೆಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಗೆ ವಿರೋಧಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಯುನೆಸ್ಕೋದ ವಿಶ್ವ
ಪರಂಪರೆಯ (World Heritage) ಕೇಂದ್ರಕ್ಕೆ ಪ್ರಸಕ್ತ ವರ್ಷದ ಫೆಬ್ರವರಿ 17 ರಂದು ಬರೆಯಲಾದ ಮೇಲ್ಮನವಿಗೆ ವಿಶ್ವ ಪರಂಪರೆಯ ಕೇಂದ್ರ ಕಾರ್ಯದರ್ಶಿ ಲಿಖಿತವಾಗಿ ಉತ್ತರಿಸಿದ್ದಾರೆ.
ಅಘನಾಶಿನಿ ನದಿ ಜೋಡಣೆಗೆ(Aghhanashini River Alignment) ವ್ಯಾಪಕವಾದ ಜನಾಂದೋಲನ ಉಂಟಾಗಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಜನಜಾಗೃತೆ ಹಮ್ಮಿಕೊಂಡು 25 ಸಾವಿರ ಕುಟುಂಬಕ್ಕೂ ಮಿಕ್ಕಿ, ನದಿ ಜೋಡಣೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ (Central and State Government) ಆಕ್ಷೇಪ ಪತ್ರ ಹೋರಾಟಗಾರರ ವೇದಿಕೆಯು ಸಲ್ಲಿಸಿತು. ಯೋಜನೆಗೆ ಆಕ್ಷೇಪಿಸಿ ಯುನೆಸ್ಕೋ ವಿಶ್ವ ಪರಂಪರೆ (UNESCO World Heritage) ಕೇಂದ್ರಕ್ಕೂ ಕಾನೂನಾತ್ಮಕ, ನೈಸರ್ಗಿಕ, ಭೌಗೋಳಿಕ ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ ಘಟ್ಟದಲ್ಲಿನ(Western Ghat) ಪರಿಸರ ಮೌಲ್ಯತೆ ಅಂಶಗಳನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ತಾಂತ್ರಿಕ ಮತ್ತು ಪರಿಸರ ವಿರೋಧಿ ಯೋಜನೆ ವಿರುದ್ದ ರಾಷ್ಟ್ರೀಯ ಪ್ರಾಧಿಕಾರದ(National Authority) ಗಮನಕ್ಕೂ ತರಬಹುದಾಗಿದೆ ಎಂದು ಮಾರ್ಚ 16 ರಂದು ಬರೆದ ಉತ್ತರದಲ್ಲಿ ಪ್ರಸ್ತಾಪಿಸಿದೆ ಅಲ್ಲದೇ, ಪಶ್ಚಿಮ ಘಟ್ಟಗಳ ರಕ್ಷಣೆ, ಸಂರಕ್ಷಣೆಯಲ್ಲಿ ಸಂಬಂಧಪಟ್ಟ ಎಲ್ಲಾ ಹಂತದಲ್ಲೂ ಯುನೆಸ್ಕೋ (UNESCO) ಬೆಂಬಲಿಸಲು ಬದ್ಧವಾಗಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದೆ ಎಂದು ರವೀಂದ್ರನಾಥ ತಿಳಿಸಿದ್ದಾರೆ.
ಪಶ್ಚಿಮ ಘಟ್ಟ- “ ವಿಶ್ವ ಪರಂಪರೆಯ ಆಸ್ತಿ : ವಿಶ್ವ ಪರಂಪರೆಯ ಸಮಾವೇಶಕ್ಕೆ ಏಕಕಾಲದಲ್ಲಿ ಅಳವಡಿಸಿಕೊಳ್ಳಲಾದ ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆಗೆ ಸಂಬಂಧಿಸಿ 1972 ರ ಸಮಾವೇಶದ ಶಿಫಾರಸ್ಸಿನ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆ, ಸಂರಕ್ಷಣೆ ಮತ್ತು ಪ್ರಸ್ತುತಿಯ ಜವಾಬ್ದಾರಿಯು ಮೊದಲನೆದಾಗಿ ಅದು ಇರುವ ರಾಜ್ಯಗಳ ಮೇಲಿದೆ ಎಂಬುದನ್ನು ಉತ್ತರದಲ್ಲಿ
ಪ್ರಸ್ತಾಪಿಸಿ ಪಶ್ಚಿಮ ಘಟ್ಟಗಳು(Western Ghats) ವಿಶ್ವ ಪರಂಪರೆಯ (World Heritage) ಆಸ್ತಿ ಎಂದು ಪತ್ರದಲ್ಲಿ ಉಲ್ಲೇಖಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಕ್ಕೆ ಯುನೆಸ್ಕೊ ಅಭಿನಂದನೆ : ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತಾವಿತ ಅಘನಾಶಿನಿ – ವೇದಾವತಿ ನದಿ ಜೋಡಣೆ(Agjanashini – Vedavati River Alignment) ಯೋಜನೆ ಮತ್ತು ಇತರ ಅಭಿವೃದ್ದಿ ಯೋಜನೆಗಳ (Development Project) ಬಗ್ಗೆ ಕಳವಳ ವ್ಯಕ್ತಪಡಿಸಿದ ಮೇಲ್ಮನವಿಗೆ ಹಾಗೂ
ಪರಂಪರೆಯ ರಕ್ಷಣೆ, ಸಂರಕ್ಷಣೆ ಮತ್ತು ಪ್ರಸರಣದ ಬಗ್ಗೆ ಆಸಕ್ತಿ ಮತ್ತು ಪ್ರಯತ್ನಗಳಿಗೆ ಯುನೆಸ್ಕೋ ವಿಶ್ವ ಪರಂಪರೆ (UNESCO World Heritage) ಕೇಂದ್ರ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಹಣ ಪಡೆಯುತ್ತಿರುವ ಆರೋಪ. ವೈದ್ಯರನ್ನು ತರಾಟೆಗೆ ತೆಗೆದುಕೊಂಡ ದೇಶಪಾಂಡೆ.
ಬೈಕ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿ. ಸವಾರ ಸ್ಥಳದಲ್ಲಿ ದುರ್ಮರಣ.
