ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) : ಅತಿವೇಗದಲ್ಲಿ ಬಂದ ಪ್ರವಾಸಿಗರ ಕಾರೊಂದು(Car) ರಸ್ತೆ ಅಂಚಿನ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಗೋಕರ್ಣದಲ್ಲಿ(Gokarn) ನಡೆದಿದೆ.
ದಂಡೆಭಾಗದಿಂದ ಮೀನು ಮಾರುಕಟ್ಟೆ(Dandebag to Fish Market) ಕಡೆಗೆ ತೆರಳುವ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ವಿಶ್ವನಾಥ ಎಂ. ಭಟ್ ಬೇಲೆಹಿತ್ತಲ ಅವರ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಸ್ಕೂಟರ್, ಗೇಟ್ ಹಾಗೂ ಇತರೆ ವಸ್ತುಗಳಿಗೆ ಘಟನೆಯಿಂದ ಭಾರೀ ಹಾನಿಯಾಗಿದೆ. ಅತಿ ವೇಗದಲ್ಲಿ ಬಂದ ಕಾರಿನ ಡಿಕ್ಕಿಯಿಂದ ಎರಡು ಬೈಕ್‌ಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ ಎಂದು ತಿಳಿದುಬಂದಿದೆ. ಮೈಸೂರಿನಿಂದ ಬಂದ ಪ್ರವಾಸಿಗರ(Mysore Tourist) ವಾಹನವಾಗಿದ್ದು, ಕಾರಿನಲ್ಲಿ ವಿದೇಶಿ ಪ್ರಜೆಗಳೂ ಇದ್ದರು ಎನ್ನಲಾಗಿದೆ.
ಸದ್ಯ ಘಟನೆಯ ಬಗ್ಗೆ ಮನೆಯ ಮಾಲಕರು ಗೋಕರ್ಣ ಪೊಲೀಸರಿಗೆ(Gokarn Police) ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ : ‘ಪಡ್ತಿ ಪ್ರೀಮಿಯರ್ ಲೀಗ್ ಸೀಸನ್ 3’ ಕ್ರಿಕೆಟ್ ಟೂರ್ನಿ ಮಾರ್ಚ್ 25 ರಿಂದ ಆರಂಭ. ಹತ್ತು ತಂಡಗಳು ಭಾಗಿ
ಯುನೆಸ್ಕೋದಿಂದ ರವೀಂದ್ರ ನಾಯ್ಕಗೆ ಉತ್ತರ.ವಿಶ್ವ ಪರಂಪರೆಯ ಸಮಾವೇಶದ ಮಾರ್ಗಸೂಚಿ ಅನುಸರಿಸಲು ಭಾರತ ಸರ್ಕಾರಕ್ಕೆ ಸೂಚನೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಹಣ ಪಡೆಯುತ್ತಿರುವ ಆರೋಪ. ವೈದ್ಯರನ್ನು ತರಾಟೆಗೆ ತೆಗೆದುಕೊಂಡ ದೇಶಪಾಂಡೆ.
