ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) : ಇಲ್ಲಿನ ಕೆರವಾಡಾ ಪ್ರದೇಶದಲ್ಲಿರುವ ಬಂದ್ ಆಗಿದ್ದ ಶ್ರೇಯಸ್ ಪೇಪರ್ ಮಿಲ್(Shreyas Paper Mill) ಆವರಣದಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಂಪನಿಯ ಆವರಣದಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು(Plastic Waste) ಸುಡಲು ಮಾಲೀಕರು ಬೆಂಕಿ ಹಚ್ಚಿದ ಪರಿಣಾಮ, ಬೆಂಕಿ(Fire) ನಿಯಂತ್ರಣ ತಪ್ಪಿ ಮಿಲ್‌ನ ಸುತ್ತಮುತ್ತಲಿನ ಪ್ರದೇಶಕ್ಕೆ ಅಪಾಯಕಾರಿಯಾಗಿ ಹರಡುತ್ತಿದೆ ಎಂದು ತಿಳಿದುಬಂದಿದೆ.

ಬೆಂಕಿ ಹತ್ತಿರದ ಗ್ರಾಮಗಳು ಹಾಗೂ ಅರಣ್ಯ ಪ್ರದೇಶಕ್ಕೂ ವಿಸ್ತರಿಸುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಗ್ನಿ ನಿಯಂತ್ರಣಕ್ಕೆ ಬರದಿದ್ದರೆ ಕಂಪನಿಯ ಕಟ್ಟಡಗಳು ಸೇರಿದಂತೆ ಇತರೆ ಆಸ್ತಿಪಾಸ್ತಿಗಳಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸುವ ಸಾಧ್ಯತೆ ಇದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಸಿ.ಪಿ.ಐ. ಶಿವಾನಂದ ಅಂಬಿಗೇರ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.  ಕಾಗದ ಕಂಪನಿಯ  ಅಗ್ನಿಶಾಮಕ ದಳ(Fire Brigade) ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದು, ಹಳಿಯಾಳ(Haliyal) ಹಾಗೂ ಜೊಯಿಡಾ(Joida) ಪಟ್ಟಣಗಳಿಂದಲೂ ಹೆಚ್ಚುವರಿ ಅಗ್ನಿಶಾಮಕ ದಳಗಳು ಆಗಮಿಸುತ್ತಿವೆ. ಆದರೂ ಬೆಂಕಿ(Fire) ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲವೆಂದು ತಿಳಿದುಬಂದಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಮುಂಜಾಗ್ರತೆ ವಹಿಸದೆ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚಿದ ಮಾಲಕ ಎಸ್.ಎಸ್. ಸೊರಗಾಂವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದೇ ಸ್ಥಳದಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ಕೂಡ ಪ್ಲಾಸ್ಟಿಕ್ ಸುಡುವ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಆಗಲೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತ್ತು.  ಆದರೆ ನಿಯಮ ಮೀರಿ ಮಾಲೀಕ ಮತ್ತೆ ಮತ್ತೆ ಅಪಾಯಕಾರಿ ವಾತಾವರಣ ಸೃಷ್ಟಿಸುತ್ತಿರೋದಕ್ಕೆ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ರಸ್ತೆ ಅಂಚಿನ ಮನೆಗೆ ನುಗ್ಗಿದ ಪ್ರವಾಸಿ ಕಾರು. ಸ್ಕೂಟರ್, ಗೇಟ್ ಜಖಂ.

ಪಡ್ತಿ ಪ್ರೀಮಿಯರ್ ಲೀಗ್ ಸೀಸನ್ 3’ ಕ್ರಿಕೆಟ್ ಟೂರ್ನಿ ಮಾರ್ಚ್ 25 ರಿಂದ ಆರಂಭ.‌ ಹತ್ತು‌ ತಂಡಗಳು ಭಾಗಿ

ಯುನೆಸ್ಕೋದಿಂದ ರವೀಂದ್ರ ನಾಯ್ಕಗೆ ಉತ್ತರ.ವಿಶ್ವ ಪರಂಪರೆಯ ಸಮಾವೇಶದ ಮಾರ್ಗಸೂಚಿ ಅನುಸರಿಸಲು ಭಾರತ ಸರ್ಕಾರಕ್ಕೆ ಸೂಚನೆ.