ಇ ಸಮಾಚಾರ ಡಿಜಿಟಲ್ನ್ಯೂಸ್ (esamachara  digital news) ಕಾರವಾರ(Karwar) : ಎಲ್‌ಪಿಜಿ ಸಿಲಿಂಡರ್‌ಗಳ(LPG Cylinder) ಅಕ್ರಮ ಸಾಗಾಟ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ–ಗೋವಾ ಗಡಿಭಾಗದಲ್ಲಿ(Karwar-Goa Boarder) ಪೊಲೀಸರು ತಪಾಸಣೆಯನ್ನು(Police Inspection) ಕೈಗೊಂಡಿದ್ದಾರೆ.

ಕಾರವಾರದ ಮಾಜಾಳಿ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway)  ವಾಹನಗಳ ಪರಿಶೀಲನೆ ತೀವ್ರಗೊಳಿಸಲಾಗಿದ್ದು, ಗಡಿಭಾಗದಿಂದ ಸಂಚರಿಸುವ ಪ್ರತಿಯೊಂದು ವಾಹನವನ್ನು ನಿಗಾ ವಹಿಸಿ ಪರಿಶೀಲಿಸಲಾಗುತ್ತಿದೆ.

ಇದುವರೆಗೆ ಗೋವಾಕ್ಕೆ(Goa) ಅಕ್ರಮ ಮದ್ಯ ಸಾಗಾಟವನ್ನು ತಡೆಯಲು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು, ಇದೀಗ ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಸಾಗಾಟದ ಮೇಲೂ ವಿಶೇಷ ಗಮನ ಹರಿಸಿದ್ದಾರೆ. ಗೋವಾದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ(Commercial Cylinder) ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಕಾರವಾರ(Karwar) ಭಾಗದಿಂದ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಾರವಾರ ಮತ್ತು ಗೋವಾ(Karwar And Goa) ಗಡಿ ಕೇವಲ ಸುಮಾರು 10 ಕಿಲೋಮೀಟರ್ ದೂರದಲ್ಲಿರುವುದರಿಂದ, ಕೆಲವರು ಸಂಬಂಧಿಕರ ಭೇಟಿ ಎಂಬ ನೆಪವೊಡ್ಡಿ ಸಿಲಿಂಡರ್‌ಗಳನ್ನು ಸಾಗಿಸುವ ಸಾಧ್ಯತೆ ಕುರಿತು ಶಂಕೆ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ(DC Lakshmipriya) ಅವರ ಸೂಚನೆಯಂತೆ ವಿಶೇಷ ಪೊಲೀಸ್ ತಂಡವನ್ನು(Special Police Team) ರಚಿಸಲಾಗಿದ್ದು, ಗಡಿಭಾಗದಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಯಾವುದೇ ಅಕ್ರಮ ಚಟುವಟಿಕೆ ಪತ್ತೆಯಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : ಮಾರ್ಚ್ 29ರಂದು ಉಪ್ಪಿನಹೊಯ್ಗೆ ನಾರಾಯಣ ದೇವಸ್ಥಾನಕ್ಕೆ ದೇವರ ಪಲ್ಲಕ್ಕಿ

ಬೈಕ್ ಅಪಘಾತ. ಸವಾರ ಸ್ಥಳದಲ್ಲಿ ಸಾವು.