ಭಟ್ಕಳ(Bhatkal) : ಕಾಂಪಾ ಯೋಜನೆಯಡಿ(Kampa Scheme) ಹೊನ್ನಾವರ ವಿಭಾಗ (Honnavar Division) ಭಟ್ಕಳ ವಲಯದಲ್ಲಿ (Bhatkal Range) ಭಟ್ಕಳ ಸಾಗರ ರಸ್ತೆಗೆ ತೆರಳುವ ಪಕ್ಕದಲ್ಲಿ ನಿರ್ಮಿಸಲಾಗಿರುವ ಮುಂಚೂಣಿ ಸಿಬ್ಬಂದಿಗಳ ನೂತನ ಅರಣ್ಯ ಇಲಾಖೆ ವಸತಿ ಗೃಹ ಸಂಕೀರ್ಣವನ್ನು ಮೀನುಗಾರಿಕೆ, ಬಂದರು ಹಾಗೂ ಒಳ ನಾಡು ಜಲ ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ(Mankal Vaidya) ಉದ್ಘಾಟಿಸಿದರು.
ನೂತನ ವಸತಿ ಗೃಹ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಕೂಡ ಇಂತಹ ವಸತಿ ಗೃಹವನ್ನು ನಿರ್ಮಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕೊಡಬೇಕೆಂದು ನಿರ್ಧಾರ ಮಾಡಿದ್ದೇನೆ. ಸಂಬಂಧ ಪಟ್ಟ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಮುಖ್ಯಮಂತ್ರಿ , ಉಪಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಯಾಕೆಂದರೆ ಅಗತ್ಯವಿರುವ ಅರಣ್ಯ ಭೂಮಿಯನ್ನು ಉಳಿಯಬೇಕು ಎನ್ನುವ ಇಲಾಖೆ ಇಂತಹ ಅದ್ಬುತ ಕಾರ್ಯಕ್ರಮವನ್ನು ನೀಡಿರುವುದಕ್ಕೆ ವೇಳೆ ಧನ್ಯವಾದ ತಿಳಿಸುತ್ತೇನೆ ಎಂದ ಅವರು ಭಟ್ಕಳ ತಾಲೂಕಿನಲ್ಲಿ ನೂರು ಅರಣ್ಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಅನೇಕರು ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ವಸತಿ ಗೃಹದಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಾಡಿಗೆ ಮನೆಯಲ್ಲಿರುವುದನ್ನು ನಿಲ್ಲಿಸಿ ಅವರಿಗೆ ಸ್ವಂತ ಆಶ್ರಯ ಕೊಡಬೇಕೆಂದು ನಾವು ತೀರ್ಮಾನ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ವಿಶ್ವನಾಥ ಎ.ವಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಪಿ. ಬೊಕ್ಕಸದ, ಮಂಕಿ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಇದನ್ನು ಓದಿ : ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ