ಇ ಸಮಾಚಾರ ಡಿಜಿಟಲ್ನ್ಯೂಸ್ (esamachara  digital news) ಕಾರವಾರ(Karwar) : ದಾರಿ ಮಧ್ಯೆ ಬಿದ್ದ ಹಣದ ಕಂತೆಯನ್ನ ಪೊಲೀಸ್ ಠಾಣೆಯ ಮೂಲಕ ಸಂಬಂಧಪಟ್ಟವರಿಗೆ  ನೀಡಿ ಪ್ರಾಮಾಣಿಕತೆ(Honesty) ಮೆರೆದ ಘಟನೆ ಕಾರವಾರದಲ್ಲಿ ನಡೆದಿದೆ.

ನಗರದ ಅಂಬೇಡ್ಕರ್ ವೃತ್ತದ(Ambedkar) ಬಳಿ ಕೋಡಿಭಾಗದ ನಿವಾಸಿ ಸಚಿನ್ ಬಾಲು ರೇವಂಡಿಕರ್ ಎಂಬುವರಿಗೆ ರಸ್ತೆಯಲ್ಲಿ ₹500 ನೋಟುಗಳ ಕಂತೆ ಸಿಕ್ಕಿತ್ತು. ಆ ಸಂದರ್ಭದಲ್ಲಿ  ಸಾಮಾಜಿಕ ಕಾರ್ಯಕರ್ತ ಅಮಿತ್ ಕಾಮತ್ ಅವರು ಇದ್ದರು. ಹಣವನ್ನು ಪರಿಶೀಲಿಸಿದಾಗ ಒಟ್ಟು ₹50 ಸಾವಿರ ಇರುವುದಾಗಿ ತಿಳಿದುಬಂದಿತು.  ಸಿಕ್ಕ ಹಣ ತಮ್ಮದಲ್ಲವೆಂದು   ಸಚಿನ್ ಹಾಗೂ ಅಮಿತ್  ಅವರು ಹಣ ಕಳೆದುಕೊಂಡವರು ಯಾರು ಎಂಬುದು ಗೊತ್ತಾಗದೇ  ನಗರ ಠಾಣೆಗೆ(Town Station) ತಲುಪಿಸಿದರು.

ಸಚಿನ್  ಅವರು ತಮ್ಮ ಕುಟುಂಬದ  ಆರ್ಥಿಕ ಪರಿಸ್ಥಿತಿ ಹದಗೆಟ್ಟರೂ  ಪರರ ಹಣಕ್ಕೆ ಆಸೆಪಡದೆ ಮಾನವೀಯ(Humanity) ಕಾರ್ಯ ಮಾಡಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಹಣ ಕಳೆದುಕೊಂಡವರು ಅಮಿತ್ ಅವರಿಗೆ ಸಿಕ್ಕಾಗ  ಪೊಲೀಸ್ ಠಾಣೆಯಲ್ಲಿ(Police Station) ಹಣ ನೀಡಿರೋದಾಗಿ ತಿಳಿಸಿದ್ದಾರೆ.  ಕಾರವಾರದ ನಿವೃತ್ತ ತಹಶೀಲ್ದಾರ್ ಎಫ್. ಶೇಖ್ ಅವರು ತಾವು ಬ್ಯಾಂಕ್‌ನಿಂದ ಹಣ ತೆಗೆಯುವಾಗ ದಾರಿಯಲ್ಲಿ ಕಳೆದುಕೊಂಡಿರುವುದಾಗಿ ತಿಳಿಸಿ ಠಾಣೆಗೆ ಬಂದು ತಿಳಿಸಿದ್ದಾರೆ. ಪರಿಶೀಲನೆಯ ಬಳಿಕ ಪಿಎಸ್ಐ ಉದ್ದಪ್ಪ ಹಾಗೂ ಸಿಪಿಐ ಜಯಶ್ರೀ ಎಸ್‌ ಎಂ ಅವರ ಸಮ್ಮುಖದಲ್ಲಿ ಸಚಿನ್  ಅವರಿಂದಲೇ ಹಣವನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ಪೊಲೀಸ್ ಇಲಾಖೆ(Police Department) ಹಾಗೂ ಸಾರ್ವಜನಿಕ ವಲಯದಲ್ಲಿ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ : ಕಾರವಾರ–ಗೋವಾ ಗಡಿಯಲ್ಲಿ ಸಿಲಿಂಡರ್ ಅಕ್ರಮ ಸಾಗಾಟ ಶಂಕೆ.  ಪೊಲೀಸರಿಂದ ವಾಹನಗಳ ತಪಾಸಣೆ.