ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಗೃಹ ಸಚಿವರಆಪ್ತ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ(Gopalkrishna Nayak) ಅವರ ಮೇಲೆ ಅಪರಿಚಿತರ ಗುಂಪು ಕೊಲೆಗೆ ಯತ್ನಿಸಿದ(Attempt Murder) ಘಟನೆ ಕಣಕಣೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಬುಧವಾರ ಬೆಳಿಗ್ಗೆ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಗೋಪಾಲಕೃಷ್ಣ ಅವರು ತಮ್ಮ ಕಾರಿನಿಂದ ಇಳಿದು ಹೇರ್ ಕಟಿಂಗ್ ಮಾಡಲು ಬಂದ ಸಂದರ್ಭದಲ್ಲಿ ಅವರನ್ನ ಹಿಂಬಾಲಿಸಿದ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತಕ್ಷಣ ಅವರು ಸಮೀಪದಲ್ಲಿದ್ದ ಬ್ಯಾಂಕ್ ಒಂದರೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಿಂದ ಪ್ರಾಣಾಪಾಯ ತಪ್ಪಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ದುಷ್ಕರ್ಮಿಗಳು ಗೋವಾ ನೋಂದಣಿಯ(Goa Registration) ಕಾರಿನಲ್ಲಿ ಬಂದಿದ್ದು ಗ್ಯಾಂಗ್ ಕಳೆದ ಮೂರು ದಿನಗಳಿಂದ ಅಂಕೋಲಾ ಪಟ್ಟಣದ(Ankola Town) ಹೊಟೇಲ್ ಒಂದರಲ್ಲಿ ವಾಸ್ತವ್ಯ ಇದ್ದರು ಎನ್ನಲಾಗಿದೆ.
ಗಾಯಗೊಂಡ ಗೋಪಾಲಕೃಷ್ಣ ನಾಯಕ ಅವರನ್ನ ಅಂಕೋಲಾದ(Ankola) ಅವಿನಾಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ದುಷ್ಕರ್ಮಿಗಳ ಪತ್ತೆಗಾಗಿ ಅಂಕೋಲಾ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಪ್ರಕರಣ ದಾಖಲಾಗಿದೆ.
