ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar) : ಅಂಕೋಲಾ(Ankola) ನಗರದಲ್ಲಿ ಉದ್ಯಮಿ ಗೋಪಾಲಕೃಷ್ಣ ರಾಮಚಂದ್ರ ನಾಯಕ(Gopalkrishna Ramachandra’s Nayak) ಇವರ ಮೇಲೆ ನಡೆದ ಕೊಲೆ ಯತ್ನದ ಪ್ರಮುಖ ಆರೋಪಿಗಳ ಸುಳಿವು(Accused Clue) ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ(Police Department) ಘೋಷಿಸಿದೆ.
ಸೌತ್ ಗೋವಾದ(South Goa) ಕೋನ್ಸುವಾಮ ಕೊರ್ಟಾಲಿಮ್ ನ ಮಕ್‌ದುಮ್ ಅಸ್ರಫ್ ನಗರದ ಮೊಹಮ್ಮದ್ ಇಮ್ರಾನ ಸಲ್ಮಾನಿ (46) ಮತ್ತು ಹಾವೇರಿ ಜಿಲ್ಲೆಯ(Haveri District) ಹಿರೇಕೆರೂರು(Herekerooru) ತಾಲೂಕಿನ ಮಾಸೂರಿನ ಕೋಟೆ ಓಣಿಯ ಅಬ್ದುಲ್ ಗನಿ (31) ಅವರು ಪ್ರಮುಖ ಆರೋಪಿಗಳಾಗಿದ್ದಾರೆ. ಈವರೆಗೆ ಆರೋಪಿಗಳು ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ.
ಸದರಿ ಆರೋಪಿಗಳಿಗೆ ದಸ್ತಗಿರಿ ಮಾಡಿ ವಿಚಾರಣೆ ಕೈಗೊಳ್ಳುವುದು ಅವಶ್ಯವಿದ್ದು, ಆರೋಪಿಗಳ ಬಗ್ಗೆ ಸುಳಿವು ಮಾಹಿತಿ ಇದ್ದಲ್ಲಿ, ಪೊಲೀಸ್ ನಿರೀಕ್ಷಕರ ದೂ.ಸಂಖ್ಯೆ: 9480805258 ಗೆ ಮಾಹಿತಿ ಒದಗಿಸುವ ಮಾಹಿತಿದಾರರಿಗೆ ತಲಾ 25,000 ರೂಪಾಯಿ ಬಹುಮಾನ ನೀಡಲಾಗುವುದು ಹಾಗೂ ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕರಣದ ತನಿಖಾಧಿಕಾರಿ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಯ(Yallapur Police Station) ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ.
