ಕಾರವಾರ (KARWAR) : ಮುಂಬೈ ನ ಕೊರಿಯರ್ ಸರ್ವಿಸ್(Mumbai Courrier Service) ನಿಂದ ಮಾತನಾಡುತ್ತಿರುವುದಾಗಿ ಹೇಳಿ ಬಳಿಕ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ವಿಡಿಯೋ ಕಾಲ್(Video Call) ಮಾಡಿದ ವ್ಯಕ್ತಿಯನ್ನು ನಂಬಿದ ಕಾರವಾರದ ವ್ಯಕ್ತಿಯೋರ್ವ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ನಡೆದಿದೆ.
ಒಟ್ಟು 3.80 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ (CEN Crime Police Station) ಪ್ರಕರಣ ದಾಖಲಾಗಿದೆ. ಕಾರವಾರದ (Karwar) ಮುಖ್ಯ ರಸ್ತೆಯಲ್ಲಿ ವಾಸವಾಗಿರುವ ವಿಲ್ಸನ್ ಫರ್ನಾಂಡಿಸ್ ಮೋಸ ಹೋದವರು. ಮೊಬೈಲ್ ಸಂಖ್ಯೆ 8000957815 ನಂಬರಿಂದ ಕಾಲ್ ಮಾಡಿದ ಅಪರಿಚಿತ ವ್ಯಕ್ತಿ ತಾನು ಡಿ.ಎಚ್.ಎಲ್ ಕೋರಿಯರ್ ಸರ್ವಿಸ್ (DHL Courrier Service) ಮುಂಬೈದಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ. ಅವರ ಹೆಸರಿನಲ್ಲಿರುವ ಪಾರ್ಸಲ್‌ದಲ್ಲಿ ಎಂಡಿಎಂಎ (MDMA) ಮಾದಕವಸ್ತು ಇದೆ. ಕೂಡಲೇ ಆನ್‌ಲೈನ್ ಮೂಲಕ ದೂರು ದಾಖಲು (Online complaint) ಮಾಡಬೇಕಾಗುತ್ತದೆ. ತಾನು ಮುಂಬೈ ಪೊಲೀಸರಿಗೆ(Mumbai Police) ಕರೆಯನ್ನು ಫಾರ್ವಡ್ ಮಾಡುವುದಾಗಿ ಹೇಳಿದ್ದಾನೆ.
ಕೆಲ ಹೊತ್ತಿನಲ್ಲಿ 9520283075 ಮೊಬೈಲ್ ಸಂಖ್ಯೆಯಿಂದ ಇನ್ನೊಬ್ಬ ವ್ಯಕ್ತಿ ವಾಟ್ಸಪ್ ವಿಡಿಯೋ ಕರೆ ಮಾಡಿದ್ದಾನೆ. ಮುಂಬೈ ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿಕೊಂಡಿದ್ದ ವ್ಯಕ್ತಿಯು, ವಿಲ್ಸನ್ ಹೆಸರಿನಲ್ಲಿರುವ ಪಾರ್ಸಲ್‌ದಲ್ಲಿ 400 ಗ್ರಾಂ MDMA ಮಾದಕವಸ್ತು, ಬೇರೆ ಬೇರೆ ಹೆಸರಿನಲ್ಲಿರುವ ಏಳು ಪಾಸಪೋರ್ಟ್ ಗಳು, ಬೇರೆ ಬೇರೆ ಹೆಸರಿನಲ್ಲಿರುವ ಐದು ಕ್ರೆಡಿಟ್ ಕಾರ್ಡ್ ಗಳು(Credit Card) ಮತ್ತು 35 ಕೆ.ಜಿ ಬಟ್ಟೆ ಇರುವುದಾಗಿ ತಿಳಿಸಿದ್ದಾನೆ.
ಇವುಗಳ ವೆರಿಫಿಕೇಶನ್ ಮುಗಿಯುವರೆಗೆ ಯಾರಿಗೂ ವಿಷಯವನ್ನು ಹೇಳಬಾರದು. ಯಾರ ಸಂಪರ್ಕಕ್ಕೂ ಸಿಗಬಾರದು. ವಾಟ್ಸಪ್ (Whatsapp) ವಿಡಿಯೋ ಕರೆ (video call) ಕಟ್ ಮಾಡಬಾರದು ಎಂದು ಹೆದರಿಸಿದ್ದಾನೆ. ಇದೇ ಸಂದರ್ಭದಲ್ಲಿ ಖತರ್ನಾಕ್ ಆದ್ಮಿಗಳು ಹಣದ ಬೇಡಿಕೆ ಇಟ್ಟು 3.80ಲಕ್ಷ ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮೋಸ ಮಾಡಿದ ಬಗ್ಗೆ ವಿಲ್ಸನ್ ಫರ್ನಾಂಡಿಸ್ ಅವರ ಸಹೋದರ ರಾಫೆಲ್ ಫರ್ನಾಂಡಿಸ್ ಸಿಇಏನ್ ಪೊಲೀಸ್ ಠಾಣೆಯಲ್ಲಿ(CEN Police Station) ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ಜಲಪಾತದಲ್ಲಿ ಮುಳುಗುತ್ತಿದ್ದ ಪ್ರವಾಸಿ ರಕ್ಷಣೆ
ಮನೆಯಲ್ಲಿ ಮಹಿಳೆ ಸಾವು. ಪ್ರಕರಣ ದಾಖಲು