ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಕಾರವಾರ(Karwar) : ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ(Congress Leader Gopalkrishna Nayak) ಅವರ ಮೇಲೆ ನಡೆದಿದ್ದ ಕೊಲೆ ಯತ್ನ(Attempt Murder) ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳಿಗೆ  ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕಾರವಾರದ ಮಾಜಾಳಿ ಚೆಕ್‌ಪೋಸ್ಟ್(Majali Check post) ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಗೋವಾ(Goa) ಕಡೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ದುಷ್ಕರ್ಮಿಗಳ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದರಲ್ಲಿ ದಢೂತಿ ದೇಹದವರು, ಗಡ್ಡದಾರಿಗಳು ಇದ್ದಾರೆ.

ಬುಧವಾರ ಬೆಳಿಗ್ಗೆ ಹೇರ್ ಕಟಿಂಗ್ ಮಾಡಿ ವಾಪಾಸ್ಸಾಗುತ್ತಿದ್ದ  ಗೋಪಾಲಕೃಷ್ಣ ನಾಯಕ(Gopalkrishna Nayak) ಅವರ ಮೇಲೆ ದುಷ್ಕರ್ಮಿಗಳು  ಪ್ರಾಣಾಪಾಯಕಾರಿಯಾಗಿ ದಾಳಿ ನಡೆಸಿದ್ದರು. ಈ ಘಟನೆ  ಪಟ್ಟಣದಲ್ಲಿ ಸಂಚಲನ ಮೂಡಿಸಿತ್ತು. ಗೃಹ ಸಚಿವ ಜಿ ಪರಮೇಶ್ವರ (Home Minister G Parameshwara) ಅವರ ಆಪ್ತರಾಗಿದ್ದ ಗೋಪಾಲಕೃಷ್ಣ ನಾಯಕ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ದುಷ್ಕರ್ಮಿಗಳು ಗೋವಾ ನೊಂದಣಿ(Goa Registration) ಹೊಂದಿದ ಕಾರಿನಲ್ಲಿ ಬಂದಿದ್ದು, ದಾಳಿ ಬಳಿಕ ವಾಹನ ಬಿಟ್ಟು  ಪರಾರಿಯಾಗಿದ್ದರು.  ಬಂಧಿತ ಆರೋಪಿಗಳು ಬಿಹಾರ ಮೂಲದವರಾಗಿರಬಹುದೆಂಬ(Bihar Native) ಅನುಮಾನ ವ್ಯಕ್ತವಾಗಿತ್ತಾದರೂ ಗೋವಾದವರಿರಬಹುದೆಂದು ಹೇಳಲಾಗುತ್ತಿದೆ. ಪ್ರಕರಣದ ಹಿಂದಿರುವ ನಿಜವಾದ ಸಂಚು ಹಾಗೂ ಸುಪಾರಿ ಕೊಲೆ ಯತ್ನದ ಕೋನದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

ಇದನ್ನು ಓದಿ : ಗೃಹ ಸಚಿವರ ಆಪ್ತ, ಕಾಂಗ್ರೆಸ್ ಮುಖಂಡ ಅಂಕೋಲಾದ ಗೋಪಾಲಕೃಷ್ಣ ‌ನಾಯಕ ಹತ್ಯೆಗೆ ಯತ್ನ.

ಸಚಿನ್ ಮೆಮೋರಿಯಲ್ ಟ್ರೋಫಿ: ಗೋಲ್ಡನ್ ಸ್ಟಾರ್ ಚಾಂಪಿಯನ್

ಕಾರವಾರ ನಗರದಲ್ಲಿ ಸಿಕ್ಕ ಹಣದ ಕಂತೆ ತಲುಪಿಸಿ ಮಾನವೀಯ ಕಾರ್ಯ.