ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಗೃಹ ಸಚಿವ ಡಾ. ಜಿ. ಪರಮೇಶ್ವರ್(Home Minister G Parameshwar) ಅವರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ(Congress Leader), ಕೆಪಿಸಿಸಿ(KPCC) ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ(Gopalkrishna Nayak) ಅವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳು ವಿವಿಧ ಹಿನ್ನಲೆ ಹೊಂದಿದವರೆಂಬ ಮಾಹಿತಿ ಲಭ್ಯವಾಗಿದೆ.
ಉತ್ತರಕನ್ನಡ(Uttarakannada) ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ(Ankola Town) ನಡೆದಿದ್ದ ಈ ಘಟನೆಗೆ ಸಂಬಂಧಿಸಿ ಕಾರವಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್. ಮಾಹಿತಿ ನೀಡಿದರು.
ಪ್ರಕರಣದ ತನಿಖೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು(Special Police Team) ರಚಿಸಲಾಗಿದ್ದು, ಗೋವಾ ಗಡಿಯ(Goa boarder) ಮಾಜಾಳಿ ಚೆಕ್ಪೋಸ್ಟ್ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಜಾಕೀರ್, ನೈಜಲ್, ಸದ್ದಾಂ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ಗೋವಾ ಮೂಲದವರಾಗಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಒಬ್ಬಾತ ರಿಯಲ್ ಎಸ್ಟೇಟ್(Real Estate), ಮತ್ತೊಬ್ಬ ಬೌನ್ಸರ್(Bouncers), ಇನ್ನೊಬ್ಬ ಡ್ರೈವರ್(Driver), ಮಗದೊಬ್ಬ ವೆಲ್ಡರ್(Welder) ಕೆಲಸ ಮಾಡುವವರು ಎಂದು ಹೇಳಿದ್ದಾರೆ.
ಘಟನೆಯಲ್ಲಿ ಇಬ್ಬರು ನೇರವಾಗಿ ದಾಳಿ ನಡೆಸಿದ್ದು, ಸುತ್ತಮುತ್ತ ಇನ್ನೂ ನಾಲ್ವರು ಸಹಚರರು ಇದ್ದು ಸಾಥ್ ನೀಡಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ. ಆರೋಪಿಗಳು ಆಗಾಗ ಅಂಕೋಲಾಕ್ಕೆ ಬಂದು ಹೋಗುತ್ತಿದ್ದರೆಂಬ ಮಾಹಿತಿ ದೊರೆತಿದೆ. ಗೋಪಾಲಕೃಷ್ಣ ನಾಯಕ(Gopalkrishna Nayak) ಅವರ ಕೊಲೆ ಮಾಡಲು ಸುಪಾರಿ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ದಾಳಿ ಬಳಿಕ ಪರಾರಿಯಾಗಲು ಆರೋಪಿಗಳು ಅಂಕೋಲಾದಲ್ಲೇ ಬಾಡಿಗೆ ಕಾರನ್ನು ಬಳಸಿಕೊಂಡಿದ್ದರು. ಈ ಕಾರು ಸೇರಿದಂತೆ ಎರಡು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಡಿಗೆ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಹಿಂದೆ ಇರುವ ಸೂತ್ರಧಾರರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದ್ದು ಯಾವ ಕಾರಣಕ್ಕಾಗಿ ದಾಳಿ ನಡೆಸಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.
ಸದ್ಯ ಬಿಗಿ ಭದ್ರತೆಯಲ್ಲಿ ಆರೋಪಿತರಿಗೆ ಕ್ರಿಮ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನು ಓದಿ : ಗೋಪಾಲಕೃಷ್ಣ ನಾಯಕ ಮೇಲೆ ಹತ್ಯೆ ಯತ್ನ ಪ್ರಕರಣ. ಆರೋಪಿತರ ಹೆಜ್ಜೆ ಗುರುತಿನ ದೃಶ್ಯ ವೈರಲ್.
ಅಂಕೋಲಾಕ್ಕೆ ದುಷ್ಕರ್ಮಿಗಳನ್ನ ಕರೆಸಿದವರಾರು? ಸಿಸಿಟಿವಿಯಲ್ಲಿ ದೃಶ್ಯ ಸಂಭಾಷಣೆ ಸೆರೆ.
ಕಾಂಗ್ರೆಸ್ ಮುಖಂಡನ ಹತ್ಯೆಗೆ ಯತ್ನ ಕೇಸ್. ಎಸ್ಕೇಪ್ ಆದ ದುಷ್ಕರ್ಮಿಗಳು ಲಾಕ್.
