ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಬೆಂಗಳೂರು(Bangalore) :ಅಧಿಕ  ತಾಪಮಾನದ(Heavy Temparature)  ಹಿನ್ನೆಲೆಯಲ್ಲಿ ಸಹ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ(Government Office) ಸಮಯ ಬದಲಾವಣೆ ಮಾಡಿ ರಾಜ್ಯ ಸರ್ಕಾರ ‌ಆದೇಶ(State Government Order) ಮಾಡಿದೆ.

ಕಿತ್ತೂರು ಕರ್ನಾಟಕದ(Kitturu Karnataka) ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ(Kalyana Karnataka) ಏಳು ಜಿಲ್ಲೆಗಳಲ್ಲಿ ಎರಡು ತಿಂಗಳು ಕಾಲ ಸಮಯ ಬದಲಾಯಿಸಲಾಗಿದೆ. ಕಲಬುರಗಿ ವಿಭಾಗದ(Kalburgi Division) 7 ಜಿಲ್ಲೆ ಹಾಗೂ ಬೆಳಗಾವಿ ವಿಭಾಗದ(Belagavi Division) ಎರಡು ಜಿಲ್ಲೆಗಳಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರ ತನಕ ಸರ್ಕಾರಿ ಕಚೇರಿಗಳ ಕೆಲಸದ ಸಮಯ ನಿಗದಿ ಮಾಡಲಾಗಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಕಲಬುರಗಿ(Kalaburgi), ಯಾದಗಿರಿ(Yadagiri), ಬೀದರ್(Bidar), ಬಳ್ಳಾರಿ(Ballari), ವಿಜಯನಗರ(Vijayanagar), ಕೊಪ್ಪಳ(Koppal), ರಾಯಚೂರು(Rayachuru) ಹಾಗೂ ಬೆಳಗಾವಿ(Belagavi) ವಿಭಾಗದ ವಿಜಯಪುರ(Vijayapura) ಹಾಗೂ ಬಾಗಲಕೋಟೆ(Bagalakote) ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡಿ  ಸರ್ಕಾರ ಆದೇಶ ಹೊರಡಿಸಿದೆ.

ಈ ಜಿಲ್ಲೆಗಳ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನಂತೆ ಯಾವುದೇ ಲೋಪ/ಅಡೆತಡೆಯಿಲ್ಲದೆ ಕರ್ತವ್ಯ ನಿರ್ವಹಿಸತಕ್ಕದ್ದು.‌ ಸಾರ್ವಜನಿಕರಿಗೆ ಯಾವುದೇ ರೀತಿ ಅನಾನುಕೂಲ ಆಗದಂತೆ ಮತ್ತು ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು ಎಂಬ ಷರತ್ತನ್ನು ಸಹ ಆದೇಶದಲ್ಲಿ‌ ತಿಳಿಸಲಾಗಿದೆ.

ಇದನ್ನು ಓದಿ : ಏಪ್ರಿಲ್ 5ರಿಂದ 9ರವರೆಗೆ ಮುಂಡಳ್ಳಿಯಲ್ಲಿ ಅಮ್ಮನವರ ಅಷ್ಟಬಂಧ ಬ್ರಹ್ಮಕಲಶೋತ್ಸವ

ದುಬೈಗೆ ಹಾರಿದ ಸ್ನೇಹಿತನ ಮೊಬೈಲ್ ಪಡೆದ ಆಸಾಮಿ‌. ಹಣ ಕೇಳಿದರೇ ಬೆದರಿಕೆ. ಭಟ್ಕಳದಲ್ಲಿ ‌ದೂರು.

ಗೋಪಾಲಕೃಷ್ಣ ಹತ್ಯೆ ಯತ್ನ ಪ್ರಕರಣ. ಕಾಂಗ್ರೆಸ್ ನಲ್ಲಿ ಕೊತಕೊತ ವಾತಾವರಣ.