ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಕುಮಟಾ(Kumta) : ಪಟ್ಟಣದ ಗಿಬ್ ಸರ್ಕಲ್(Gib Circle) ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಬೈಕ್ ಹಾಗೂ ಲಾರಿ(Bike and Lorry) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ  ಘಟನೆ ನಡೆದಿದೆ.

ಸುಬ್ರಮಣ್ಯ ಭೀರಪ್ಪ ಅಂಬಿಗ (35) ಮೃತ ದುರ್ದೈವಿ ಎಂದು  ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಇನ್ನೋರ್ವ ಸವಾರ ಭಗೀರಥ ಮಹಾದೇವ ಅಂಬಿಗ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಇಬ್ಬರೂ ಹೆಗಡೆ ಗ್ರಾಮದ ನಿವಾಸಿಗಳು ಎನ್ನಲಾಗಿದೆ.

ಮೀನುಗಾರಿಕಾ ಬಲೆ(Fishing Net) ಖರೀದಿಗಾಗಿ ಬೈಕಿನಲ್ಲಿ‌ ಇಬ್ಬರು ಮಲ್ಪೆಗೆ ಕಡೆಗೆ(Malpe Side) ತೆರಳುತ್ತಿದ್ದಾಗ  ಹಿಂಬದಿಯಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗಾಯಗೊಂಡಾತನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ(Kumta Government Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಮಟಾ ಪೊಲೀಸ್ ಠಾಣೆಯಲ್ಲಿ(Kumta Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಮುಂದುವರಿದಿದೆ ಗೋಗಳ್ಳರ ಕೃತ್ಯ. ಡಬಲ್ ನಂಬರ್ ಪ್ಲೇಟ್ ಅಳವಡಿಸಿ ಅಮಾಯಕರ ಹೆಸರು ಕೆಡಿಸೋ ಪ್ರಯತ್ನ.

ಅಕ್ರಮ ಮರಳು ಸಂಗ್ರಹ ಪ್ರದೇಶದ ಮೇಲೆ ಅಧಿಕಾರಿಗಳ ದಾಳಿ.